ಪ್ರತಿಭಟನಾಕಾರರನ್ನ ತಡೆಯುವ ವೇಳೆ ಡಿಸಿಪಿ ಕಾಲಿನ ಮೇಲೆ ಹರಿದ ಕಾರು. ಬೆಂಗಳೂರು,ಸೆಪ್ಟಂಬರ್,27,2021(..):ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಭಾರತ್ ಬಂದ್ ಮಾಡಲಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಹಲವು ಕಡೆಗಳಲ್ಲಿ ರೈತರ ಧರಣಿ ನಡೆಸುತ್ತಿದ್ದು ಈ ಮಧ್ಯೆ ಪ್ರತಿಭಟನಾಕಾರರನ್ನ ತಡೆಯುತ್ತಿದ್ದ ಡಿಸಿಪಿ ಕಾಲಿನ ಮೇಲೆ ಕಾರು ಹರಿದಿರುವ ಘಟನೆ ನಡೆದಿದೆ. ಬೆಂಗಳೂರಿನ ಗೊರಗುಂಟೆಪಾಳ್ಯದ ಬಳಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಪ್ರತಿಭಟನಾಕಾರರನ್ನ ತಡೆಯಲು ಮುಂದಾಗಿದ್ದರು. ಈ ವೇಳೆ ಕಾರೋಂದು ಅವರ ಕಾಲಿನ ಮೇಲೆ ಹರಿದಿದೆ. ಸದ್ಯ ಧರ್ಮೇಂದ್ರ ಕುಮಾರ್ ಮೀನಾಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಕಾರು ಹರಿಸಿದ ಚಾಲಕನ್ನ ಆರ್ ಎಂಸಿ ಯಾರ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. : - - – --