ಐಪಿಎಲ್: ಗೆಲುವಿನ ಹಳಿಗೆ ಮರಳಲು ಮುಂಬೈ ಇಂಡಿಯನ್ಸ್‌- ರಾಯಲ್‌ ಚಾಲೆಂಜರ್ ಫೈಟ್ ಬೆಂಗಳೂರು, ಸೆಪ್ಟೆಂಬರ್ 26, 2021 (..):ಐಪಿಎಲ್ ನಲ್ಲಿ ಇಂದು ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್‌ ಚಾಲೆಂಜರ್ ಬೆಂಗಳೂರು ಗೆಲುವಿನ ಹಳಿಗೆ ಮರಳಲು ಹೋರಾಡಲಿವೆ. ಅಬುಧಾಬಿಯಲ್ಲಿ ನಡೆಯುವ ದಿನದ ಮೊದಲ ಪಂದ್ಯದಲ್ಲಿ ಚೆನ್ನೈಮತ್ತು ಕೋಲ್ಕತಾ ನೈಟ್‌ರೈಡರ್ ಎದುರಾಗಲಿವೆ. ಈ ತಂಡಗಳು ಯುಎಇ ಆವೃತ್ತಿಯ ಎರಡೂ ಪಂದ್ಯಗಳನ್ನು ಗೆದ್ದಿವೆ. ಯುಎಇಗೆ ಆಗಮಿಸಿದ ಬಳಿಕ ಆರ್‌ಸಿಬಿ ಮತ್ತು ಮುಂಬೈ ಏಕರೀತಿಯ ಪ್ರದರ್ಶನ ನೀಡುತ್ತಿವೆ. ಎರಡೂ ತಂಡಗಳ ಬ್ಯಾಟಿಂಗ್‌ ಘೋರ ವೈಫ‌ಲ್ಯ ಕಂಡಿದೆ. ಅಂಕ ಪಟ್ಟಿಯಲ್ಲಿ ಮತ್ತೆ ಮೇಲೆಳಲು ಮತ್ತೆ ಗೆಲುವಿನ ಹಳಿಗೆ ಮರಳುವುದು ಎರಡೂ ತಂಡಗಳಿಗೂ ಅನಿವಾರ್ಯವಾಗಿದೆ. ಎರಡೂ ತಂಡಗಳಿಗೆ ಇದೊಂದು ಕಠಿಣ ಪಂದ್ಯವಾಗಿದ್ದು, ಯಾವ ತಂಡ ಗೆಲುವಿನ ಖಾತೆ ತೆರೆಯಲಿದೆ. ಈ ಅದೃಷ್ಟ ಯಾರಿಗಿದೆ ಎಂಬುದೊಂದು ಕುತೂಹಲ ಮೂಡಿಸಿದೆ.