ಒಂದು ದಿನ ಪ್ರಯಾಣ ಮುಂದೂಡಿ: ಬಂದ್ ಬೆಂಬಲಿಸಿ ಎಂದು ರೈತರ ಮನವಿ ಮೈಸೂರು, ಸೆಪ್ಟೆಂಬರ್ 26, 2021 (..):ನಾಳೆ ಭಾರತ್ ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣವನ್ನ ಸ್ಥಗಿತಗೊಳಿಸುವಂತೆ ರೈತ ಸಂಘ ಮನವಿ ಮಾಡಿದೆ. ದೂರದ ಪ್ರಯಾಣ ಮುಂದೂಡಿ, ಭಾರತ್ ಬಂದ್‌ಗೆ ಸಹಕರಿಸುವಂತೆ ರೈತರು ಮನವಿ ಮಾಡಿದ್ದಾರೆ. ವಕೀಲರು ಕಲಾಪವನ್ನ ಮುಂದೂಡುವ ಮೂಲಕ ರೈತರ ಹಿತ ಕಾಯಬೇಕೆಂದು ಕೋರಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಮಸೂದೆ, ಬೆಲೆ ಏರಿಕೆ ವಿರೋಧಿಸಿ ನಡೆಯುವ ಬಂದ್‌ಗೆ ಜನರು ಬೆಂಬಲಿಸಬೇಕು.ಈಗಾಗಲೇ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಪರ, ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಭಾರತ್ ಬಂದ್ ಬೆಂಬಲಿಸಿವೆ ಎಂದು ಸಂಘಟನೆ ಪ್ರಮುಖಂಡರು ಮನವಿ ಮಾಡಿದ್ದಾರೆ. ರಾಜ್ಯಾದ್ಯಂತ 250 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ರೈತರ, ನಾಡಿನ ಜನರ ಹಿತಕ್ಕಾಗಿ ಸಾರ್ವಜನಿಕರ ನಾಳಿನ ಬಂದ್ ಯಶಸ್ವಿಯಾಗಲು ಕೈಜೋಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ. : :