ಈ ಬಾರಿ ಮೈಸೂರು ಅಧಿ ದೇವತೆ ಚಾಮುಂಡೇಶ್ವರಿ ದೇಗುಲದ ಭಕ್ತರ ಹುಂಡಿ ಹಣದಲ್ಲಿ ಇಳಿಕೆ.. ಮೈಸುರು,ಸೆಪ್ಟಂಬರ್,25,2021(..):ಮೈಸೂರಿನ ಅಧಿ ದೇವತೆ ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಹಣ ಎಣಿಕೆ ಕಾರ್ಯ ನಡೆದಿದ್ದು ಈ ಭಾರಿ ಭಕ್ತರ ಹುಂಡಿ ಹಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 82,16,754 ರೂ ಸಂಗ್ರಹವಾಗಿದೆ. ಈ ಹುಂಡಿ ಹಣದಲ್ಲಿ 2 ಸಾವಿರ ಮುಖ ಬೆಲೆಯ 81 ನೋಟುಗಳು. ಐನೂರು ಮುಖ ಬೆಲೆಯ 6754 ನೋಟುಗಳು. ಇನ್ನೂರು ಮುಖಬೆಲೆಯ 2291 ನೋಟುಗಳು. ನೂರು ರೂ ಮುಖಬೆಲೆಯ 26,048 ನೋಟುಗಳು, ನಾಣ್ಯಗಳು ಸೇರಿದಂತೆ ಒಟ್ಟು 82,16,754 ರೂ ಸಂಗ್ರಹವಾಗಿದೆ. ಪ್ರತಿ ಬಾರಿ ತಾಯಿ ಚಾಮುಂಡೇಶ್ವರಿ ದೇಗುಲದ ಭಕ್ತರ ಹುಂಡಿ ಹಣ ಕೋಟಿ ದಾಟುತ್ತಿತ್ತು. ಆದರೆ ಈಗ ಇಳಿಕೆ ಕಂಡಿದೆ. : - - -