ಇಂದಿನಿಂದಲೇ ಮೈಸೂರು ಅರಮನೆ ಪ್ರವೇಶ ಟಿಕೆಟ್ ದರ ಏರಿಕೆ. ಮೈಸೂರು,ಸೆಪ್ಟಂಬರ್,25,2021(..):ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿದ್ದು, ಈ ಬೆನ್ನಲ್ಲೆ ಇದೀಗ ಇಂದಿನಿಂದಲೇ ಮೈಸೂರು ಅರಮನೆ ಪ್ರವೇಶ ಟಿಕೆಟ್ ದರವನ್ನ ಏರಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೆ ಅರಮನೆ ಪ್ರವೇಶ ಟಿಕೆಟ್ ದರವನ್ನ ಅರಮನೆ ಮಂಡಳಿ ಹೆಚ್ಚಳ ಮಾಡಿದೆ. ಅರಮನೆ ಪ್ರವೇಶ ದರ 70 ರೂ. ನಿಂದ 100 ರೂ.ಗೆ ಏರಿಕೆಯಾಗಿದೆ. ಪೋಷಕರ ಜೊತೆ ಆಗಮಿಸುವ ಮಕ್ಕಳಿಗೆ ಹಳೇಯ ದರ 30 ರೂ. ಇತ್ತು ಈಗ ಮಕ್ಕಳಿಗೆ ಹೊಸ ದರ 50 ರೂ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಹಳೆಯ ದರ 20 ರೂ ಹೊಸ ದರ 50ರೂ ಆಗಿದೆ. ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂಗೆ ನಿಗದಿ ಮಾಡಲಾಗಿದೆ. ಕೊರೋನಾ ಲಾಕ್ ಡೌನ್ ನಿಂದ ಅರಮನೆ ಮಂಡಳಿಯ ಆದಾಯ ಕುಸಿತ ಕಂಡಿತ್ತು. : - - - –- …. , 25, 2021 (..): - . . , .70 . 100 . . 30, . 50. , .20 .50 . . , . 120 . --- .: / / /