ಕೋರ್ಟ್ ಆವರಣದಲ್ಲಿ ಶೂಟೌಟ್ : ನಾಲ್ವರು ಸಾವು: ಆರು ಮಂದಿಗೆ ಗಂಭೀರ ಗಾಯ. ನವದೆಹಲಿ,ಸೆಪ್ಟಂಬರ್,24,2021(..):ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಗ್ಯಾಂಗ್ ವಾರ್ ನಡೆದಿದ್ದು ಗುಂಡಿನ ದಾಳಿ ವೇಳೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ರೋಹಿಣಿ ಕೋರ್ಟ್ ನ ರೂಂ ನಂಬರ್ 207ರಲ್ಲಿ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್ ಸ್ಟರ್ ಜೀತೇಂದ್ರ ಗೋಗಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇನ್ನು ಪೊಲೀಸರು ಇಬ್ಬರು ಶೂಟರ್ ಗಳನ್ನ ಹೊಡೆದುರುಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. : – – –