ಪದೇ ಪದೇ ಐಪಿಎಲ್ ಮುಂದೂಡಲ್ಪಟ್ಟರೆ ಚೆನ್ನೈ ಆಟಗಾರರು ಮುದುಕರಾಗಿರುತ್ತಾರೆ ಎಂದಿದ್ದೇಕೆ ಸೆಹ್ವಾಗ್ ! ಬೆಂಗಳೂರು, ಸೆಪ್ಟೆಂಬರ್ 24, 2021 (..):ಪದೇ ಪದೇ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟರೆ ಚೆನ್ನೈ ಆಟಗಾರರು ಮುದುಕರಾಗಿರುತ್ತಾರೆ ಎಂದ ಸೆಹ್ವಾಗ್ ತಮಾಷೆ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ ವಿವಿಧ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಐಪಿಎಲ್ ಮೇಲೆ ಮತ್ತೆ ಕರಿಛಾಯೆ ಆವರಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೆಹ್ವಾಗ್, ಪದೇ ಪದೇ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟರೆ ಚೆನ್ನೈ ಆಟಗಾರರು ಮುದುಕರಾಗಿರುತ್ತಾರೆ ಎಂದ ಸೆಹ್ವಾಗ್ ತಮಾಷೆ ಮಾಡಿದ್ದಾರೆ. ಈಗಾಗಲೇ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಒಮ್ಮೆ ಮುಂದೂಡಲ್ಪಟ್ಟಿದೆ, ಈಗ ಯುಎಇಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿಯೂ ಕೂಡ ಕೊರೋನಾ ಸೋಂಕಿನ ಸುದ್ದಿಗಳು ಹರಿದಾಡುತ್ತಿವೆ. ಪದೇ ಪದೇ ಟೂರ್ನಿ ಮುಂದೂಡಿದರೆ ಫೈನಲ್ ಪಂದ್ಯ ನಡೆಯುವ ಸಮಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರೆಲ್ಲಾ ಮುದುಕರಾಗಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. :