ಮೈಸೂರಿನಲ್ಲಿ ಗಮನ ಸೆಳೆದ ಸಂಚಾರಿ ವಿಜಯ್ ನಟನೆಯ “ಪುಕ್ಸಟ್ಟೆ ಲೈಫು” ಪ್ರಿಮಿಯರ್ ಶೋ ಮೈಸೂರು, ಸೆಪ್ಟೆಂಬರ್ 23, 2021 (..):ನಟ ದಿ‌.ಸಂಚಾರಿ ವಿಜಯ್ ಅಭಿನಯದ “ಪುಕ್ಸಟ್ಟೆ ಲೈಫು” ಚಿತ್ರ ಪ್ರಿಮಿಯರ್ ಪ್ರದರ್ಶನವನ್ನು ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ಆಯೋಜಿಸಲಾಗಿತ್ತು. “ಪುಕ್ಸಟ್ಟೆ ಲೈಫು” ಚಿತ್ರ ಸೆ.24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಿಮಿಯರ್ ಪ್ರದರ್ಶನವನ್ನು ಏರ್ಪಡಿಸಿದೆ. ದಿ.ಸಂಚಾರಿ ವಿಜಯ್ ನಾಯಕನಾಗಿ ನಟಿಸಿರುವ ಪುಕ್ಸಟ್ಟೆ ಲೈಫು, ಪುರುಸೊತ್ತೇ ಇಲ್ಲ ಚಿತ್ರವನ್ನು ಅರವಿಂದ್ ಕುಪ್ಳೀಕರ್ ನಿರ್ದೇಶಿಸಿದ್ದಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನಾ ನಟಿಸಿದ್ದಾರೆ. ಸಿನಿಮಾದಲ್ಲಿ ಬೀಗ ರಿಪೇರಿ ಮಾಡುವ ಮುಸ್ಲಿಂ ಯುವಕನಾಗಿ ವಿಜಯ್ ಅಭಿನಯಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪುಕ್ಸಟ್ಟೆ ಲೈಫು’ ಸಿನಿಮಾದ ಟ್ರೈಲರ್ ಹಾಗೂ ಪ್ರಮೋಷನಲ್ ವಿಡಿಯೋ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಬಿಡುಗಡೆ ಹಿನ್ನೆಲೆ ಮೈಸೂರಿನಲ್ಲಿ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿದೆ.ಪ್ರೀಮಿಯರ್ ಶೋ ನಲ್ಲಿ ಸಂಚಾರಿ ವಿಜಯ್ ಗಾಗಿ ಸೀಟು ಮೀಸಲಿರಿಸಿದ್ದ ಚಿತ್ರತಂಡ, ಅಗಲಿದ ನಟನನ್ನು ನೆನೆದು ಪ್ರೀಮಿಯರ್ ಪ್ರದರ್ಶನ ಏರ್ಪಡಿಸಲಾಗಿತ್ತು. :