ಸಾವಿರಾರು ಅಭಿಮಾನಿಗಳಿಗೆ ಖುಷಿ ಕೊಟ್ಟ ನಟಿ ರಮ್ಯಾ ಇನ್ಸ್ಟಾಗ್ರಾಮ್ ಸ್ಟೋರಿ ! ಬೆಂಗಳೂರು, ಸೆಪ್ಟೆಂಬರ್ 23, 2021 (..):ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ನಟಿ ರಮ್ಯ ಹಂಚಿಕೊಂಡಿರುವ ಮಾಹಿತಿಯೊಂದು ಸಾವಿರಾರು ಅಭಿಮಾನಿಗಳನ್ನು ಸೆಳೆದಿದೆ. ನಾನು ಸಿನಿಮಾ ಮಾಡಲು ಒಪ್ಪಿಕೊಳ್ಳುವೆ ಎಂದು ಹೇಳಿದರೆ ಸಾಕಷ್ಟು ಜನರಿಗೆ ಖುಷಿಯಾಗುತ್ತದೆ. ನನ್ನ ಬಳಿ ಸಿನಿಮಾ ಮಾಡಲು ಕೆಲ ಆಫರ್ ಬಂದಿವೆ. ಅವುಗಳಿಗೆ ನಾನು ಹೇಳಬೇಕು ಎಂದು ಯೋಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನಿಜ ಹೇಳಬೇಕೆಂದರೆ ನೋಡೋಣ ಅಂತ ಹೇಳಬೇಕಾಗುತ್ತದೆ. ನಾನು ಆಗಲ್ಲ ಎಂದು ಹೇಳಿದರೆ ಅನೇಕರು ಬೇಸರ ಮಾಡಿಕೊಳ್ಳುತ್ತಾರೆ. ಜೀವನದಲ್ಲಿ ಎಂದಿಗೂ ಆಗಲ್ಲ ಎಂದು ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಕಾಲಿಡುವ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ. ಈ ಮಾತುಗಳು ಅಭಿಮಾನಿಗಳಿಗೆ ಖುಷಿ ನೀಡಿದೆ. ಸಿನಿಮಾದಲ್ಲಿ ಸಕ್ರಿಯರಾಗುತ್ತಾರೆ ಎಂಬ ಪ್ರಶ್ನೆಗೆ ಸಾಕಾರಾತ್ಮಕ ನಿರ್ಧಾರ ತಿಳಿಸಿರುವ ರಮ್ಯಾ ಅಭಿಮಾನಿಗಳಲ್ಲಿ ಹೊಸ ಆಶಾಭಾವ ಮೂಡಿಸಿದ್ದಾರೆ. ಇನ್ನು ಎಲ್ಲರಿಗೂ ಗೊತ್ತಿರುವಂತೆ ಇದ್ದಕ್ಕಿದ್ದಂತೆ ರಾಜಕೀಯಕ್ಕೆ ರಮ್ಯಾ ಗುಡ್ ಬೈ ಹೇಳಿ ಒಂದು ವರ್ಷಗಳ ಕಾಲ ಮರೆಯಾಗಿದ್ದರು. :