ಮೈಸೂರು ಅರಮನೆಯಲ್ಲಿ ಕಳೆಗಟ್ಟಲಿದೆ ಸಾಂಪ್ರದಾಯಿಕ ದಸರಾ: ಅ.1ಕ್ಕೆ ಸಿಂಹಾಸನ ಜೋಡಣಾ ಕಾರ್ಯ. ಮೈಸೂರು,ಸೆಪ್ಟಂಬರ್,23,2021(..)ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ರಾಜವಂಶಸ್ಥರ ಸಾಂಪ್ರದಾಯಿಕ ದಸರಾ ಕಳೆಗಟ್ಟಲಿದೆ. ಸಾಂಪ್ರದಾಯಿಕ ದಸರಾದಲ್ಲಿ ಸಿಂಹಾಸನ ಜೋಡಣೆ ಗೆ ಮಹತ್ವವಾಗಿದ್ದು ಅಕ್ಟೋಬರ್ 1 ರಂದು ಖಾಸಗಿ ದರ್ಬಾರ್ ಹಾಲ್ ನಲ್ಲಿ ಸಿಂಹಾಸನ ಜೋಡಣಾ ಕಾರ್ಯ ನಡೆಯಲಿದೆ. ಸಿಂಹಾಸನ ಜೋಡಣೆ ಕಾರ್ಯದ ಮೂಲಕ ಸಾಂಪ್ರದಾಯಿಕ ಅಧಿಕೃತ ಚಾಲನೆ ಸಿಗಲಿದೆ. ಅಕ್ಟೋಬರ್ 1ರ ಶುಕ್ರವಾರ ಅಭಿಜಿತ್ ಲಗ್ನದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಸಿಂಹಾಸನ ಜೋಡಣೆಗೂ ಮುನ್ನ ಹೋಮ ಹವನ ನಡೆಸಲಾಗುತ್ತದೆ. ಜೋಡಣೆ ಕಾರ್ಯ ಬಳಿಕ ಸಾಂಪ್ರದಾಯಿಕ ದಸರಾ ಆಚರಣೆಯಲ್ಲಿ ರಾಜವಂಶಸ್ಥ ಯದುವೀರ್ ತೊಡಗಲಿದ್ದಾರೆ. ಅಂದು ಪ್ರವಾಸಿಗರಿಗೆ,ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧವಿರುತ್ತದೆ. : - - -.1