ಆಟವಾಡುತ್ತಿದ್ದಾಗ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದ ಮಗು. ಮೈಸೂರು,ಸೆಪ್ಟಂಬರ್,22,2021(..):ಆಟವಾಡುತ್ತಿದ್ದಾಗ ಮಗು ಆಯತಪ್ಪಿ ನೀರಿನ ಸಂಪ್ ಗೆ ಬಿದ್ದು ಅಸ್ವಸ್ಥವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಕ್ಷೇತ್ರಯ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗುಂಜನ್ (2) ಅಸ್ವಸ್ಥಗೊಂಡ ಮಗು. ಉದ್ಯಮಿ ಸುಜಾರಾಮ್ ಎಂಬುವವರ ಮಗು ಗುಂಜನ್ ಆಟವಾಡುತ್ತಿದ್ದಾಗ ಆಯತಪ್ಪಿ ಸಂಪ್ ಗೆ ಬಿದ್ದಿದೆ. ಈ ಮಧ್ಯೆ ಮಗು ಕಾಣದಿದ್ದಾಗ ತಾಯಿ ಹುಡುಕಾಡಿದ್ದು, ಬಳಿಕ ಸಂಪ್ ನೋಡಿದಾಗ ಮಗ ಸಂಪ್ ಬಿದ್ದಿರುವುದನ್ನು ಕಂಡು ಕೂಗಿಕೊಂಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಕುಟುಂಬಸ್ಥರು ನೆರೆಹೊರೆಯವರು ಮಗುವನ್ನು ಹೊರಕ್ಕೆ ತೆಗೆದಿದ್ದಾರೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ಮಗವನ್ನ ಕರೆದೊಯ್ಯಲಾಗಿದೆ. : - – –-