ಮೆಟ್ರೋ ಸುರಂಗ ಕೊರೆದು 13 ತಿಂಗಳ ಬಳಿಕ ಹೊರ ಬಂದ ಊರ್ಜಾ ಯಂತ್ರ: ಸಿಎಂ ಬೊಮ್ಮಾಯಿ ಅವರಿಂದ ವೀಕ್ಷಣೆ. ಬೆಂಗಳೂರು,ಸೆಪ್ಟಂಬರ್,22,2021(..):ಬೆಂಗಳೂರಿನ ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದ್ದು, ಮೆಟ್ರೋ ಸುರಂಗ ಕೊರೆದು ಸುಮಾರು 13 ತಿಂಗಳ ಬಳಿಕ ಊರ್ಜಾ ಯಂತ್ರ ಹೊರಬಂದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ 855 ಮೀಟರ್ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, 2020ರ ಆಗಸ್ಟ್​ನಲ್ಲಿ ಊರ್ಜಾ ಯಂತ್ರ ಸುರಂಗ ಪ್ರವೇಶಿಸಿತ್ತು. ಇದೀಗ 13 ತಿಂಗಳ ಬಳಿಕ ಇಂದು ಊರ್ಜಾ ಯಂತ್ರ ಹೊರಬಂದಿದೆ. ಯಂತ್ರ ಹೊರಬರುವ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು, ಊರ್ಜಾ ಬ್ರೇಕ್ ಥ್ರೂ ವೀಕ್ಷಿಸಿದರು. ಕಂಟೋನ್ಮೆಂಟ್​ನಿಂದ ಶಿವಾಜಿನಗರ ಮಾರ್ಗವಾಗಿ ಸುರಂಗ ಕೊರೆಯಲಾಗಿದ್ದು, 855 ಮೀಟರ್ ಸುರಂಗ ಕೊರೆದು ಟಿಬಿಎಂ ಹೊರ ಬಂದಿದೆ. ಮೆಟ್ರೋ 2ನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗಾವರವರೆಗೆ 21 ಕಿ.ಮೀ ಉದ್ದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. : - - 13 - - - … 13 :, 22, 2021 (..): , , 13 . 855 . 2020, , 13 . ‘ ’ ( ). . 855 . . 2nd , 21 .: / // / / / /