ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್. ಬೆಂಗಳೂರು,ಸೆಪ್ಟಂಬರ್,21,2021(..):ಬೃಹತ್ ಮತ್ತು ಮಧ್ಯಮ ಕೈಗಾರಿಕಾ ‌ಸಚಿವ ಮುರುಗೇಶ್ ಆರ್ ನಿರಾಣಿ ಅವರ ಟ್ವಿಟ್ಟರ್ ಖಾತೆಯನ್ನ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಸಚಿವ ಮುರುಗೇಶ್ ನಿರಾಣಿ ಅವರೇ ಮಾಹಿತಿ ನೀಡಿದ್ದಾರೆ. ನನ್ನ ಟ್ವಿಟರ್ ಖಾತೆ @ ಯನ್ನು ಕೆಲವರು ‌ಇಂದು ಅಜ್ಞಾತ ವಿದೇಶಿ ಸ್ಥಳದಿಂದ ಹ್ಯಾಕ್ ಮಾಡಲಾಗಿದೆ. ಆರೋಪಿಗಳ ನಿಖರವಾದ ಮೂಲ ಮತ್ತು ಗುರುತು ನಮಗೆ ತಿಳಿದಿಲ್ಲ. ಹ್ಯಾಕರ್‌ ಗಳು ಪೋಸ್ಟ್ ಮಾಡುವ ಯಾವುದೇ ಮೋಸದ ಸಂದೇಶಗಳಿಗೆ ಬಲಿಯಾಗಬೇಡಿ. ನನ್ನ ಖಾತೆಯಲ್ಲಿರುವ ಯಾವುದೇ ಅವಹೇಳನಕಾರಿ ಮತ್ತು ಅಸಂಸದೀಯ ಸಂದೇಶಗಳನ್ನು ನಿರ್ಲಕ್ಷಿಸಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಯಾರೊಬ್ಬರೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದೆಂದು ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ. ನಾವು ಟ್ವಿಟರ್‌ ಗೆ ದೂರು ನೀಡಿದ್ದೇವೆ. ಶೀಘ್ರದಲ್ಲೇ ಬೆಂಗಳೂರಿನ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡುತ್ತೇವೆ. ಈ ಹಿಂದೆಯು ಇದೇ ರೀತಿ ಕೆಲವು ದುಷ್ಕರ್ಮಿಗಳು ನನ್ನ ಫೇಸ್ ಬುಕ್ ಹ್ಯಾಕ್ ಮಾಡಿದ್ದರು ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ. : - - - -.