ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಶಾಸಕ ಸಾ.ರಾ ಮಹೇಶ್. ಬೆಂಗಳೂರು,ಸೆಪ್ಟಂಬರ್,21,2021(..): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಬಟ್ಟಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಮಾಡಿ ಆಕ್ರೋಶ ಹೊರ ಹಾಕಿದ್ದ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಇಂದು ಸದನದಲ್ಲಿ ಹಕ್ಕು ಚ್ಯುತಿಯನ್ನು ಮಂಡಿಸಿದ್ದಾರೆ. ಸದನದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ರೋಹಿಣಿ ಸಿಂಧೂರಿ ಅವರು 30 ಲಕ್ಷಕ್ಕೆ ಈಜು ಕೊಳ ಮಾಡಿಸಿಕೊಂಡಿದ್ದರು. 15 ಲಕ್ಷಕ್ಕೆ ಕಚೇರಿ ನವೀಕರಣ ಮಾಡಿಸಿಕೊಂಡಿದ್ದರು ಎಂದು ಸದನದಲ್ಲಿಯೇ ಪೋಟೋ ಜೊತೆಗೆ ಬಟ್ಟೆ ಬ್ಯಾಗ್ ಪ್ರದರ್ಶಿಸಿದರು. : - - – - .