ಅಬುದಾಭಿ ಸ್ಟೇಡಿಯಂನಲ್ಲಿ ಕಿಚ್ಚ ದಂಪತಿ! ಮ್ಯಾಚ್ ನೋಡಿದ ಸುದೀಪ್-ಪ್ರಿಯಾ ಬೆಂಗಳೂರು, ಸೆಪ್ಟೆಂಬರ್ 21, 2021 (..):ಅಬುದಾಭಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆಕೆಆರ್ ನಡುವಿನ ಐಪಿಎಲ್ ಪಂದ್ಯವನ್ನು ಸುದೀಪ್ ಪತ್ನಿ ಸಮೇತ ವೀಕ್ಷಿಸಿದ್ದಾರೆ. ದುಬೈ ಪ್ರವಾಸದಲ್ಲಿರುವ ಕಿಚ್ಚ ದಂಪತಿ ನೆನ್ನೆ ಆರ್ ಸಿಬಿ ಮ್ಯಾಚ್ ನೋಡಿ ಖುಷಿಪಟ್ಟಿತು ಪತ್ನಿ ಪ್ರಿಯಾ ಜತೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ಸುದೀಪ್ ಪಂದ್ಯ ವೀಕ್ಷಿಸಿದ್ದಾರೆ. ಈ ಮ್ಯಾಚ್ ಮಾತ್ರವಲ್ಲ ಮುಂಬೈ ಮತ್ತು ಚೆನ್ನೈ ತಂಡಗಳ ನಡುವಿನ ಪಂದ್ಯವನ್ನು ಸುದೀಪ್ ವೀಕ್ಷಿಸಿದ್ದಾರೆ. ಇನ್ನು ಎಲ್ಲರಿಗೂ ಗೊತ್ತಿರುವಂತೆ ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ನಾಯಕರಾಗಿರುವ ಸುದೀಪ್ ಅವರಿಗೆ ಕ್ರಿಕೆಟ್ ಅಂದರೆ ಅಚ್ಚು-ಮೆಚ್ಚು. ಸಿನಿಮಾ ಕೆಲಸಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಸುದೀಪ್, ಪತ್ನಿ ಪ್ರಿಯಾ ಜತೆ ದುಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಕೆಲ ಐಪಿಎಲ್ ಪಂದ್ಯಗಳನ್ನೂ ನೋಡುತ್ತಿದ್ದಾರೆ. :