ಐಪಿಎಲ್: ಗೆಲುವಿಗಾಗಿ ಇಂದು ಪಂಜಾಬ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಹೋರಾಟ ಬೆಂಗಳೂರು, ಸೆಪ್ಟೆಂಬರ್ 21, 2021 (..):ಐಪಿಎಲ್ ನಲ್ಲಿ ಪಂಜಾಬ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಇಂದು ಗೆಲುವಿಗಾಗಿ ಸೆಣೆಸಾಡಲಿವೆ. ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಟಾಪ್‌-4ರ ಆಚೆ ಇರುವುದರಿಂದ ಇಬ್ಬರಿಗೂ ಗೆಲುವು ಅನಿವಾರ್ಯವಾಗಿದೆ. ದುಬಾೖ ಟ್ರ್ಯಾಕ್‌ನಲ್ಲಿ ರನ್‌ ಪ್ರವಾಹ ನಿರೀಕ್ಷಿಸುವುದು ಅವಸರಕ್ಕೆ ಕಾರಣವಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಪಂಜಾಬ್‌ ಕೆ.ಎಲ್‌. ರಾಹುಲ್‌ ಸಾರಥ್ಯವನ್ನು ಮರಳಿ ಪಡೆಯಲಿದೆ. ಮೇ ಮೊದಲ ವಾರ ಅಪೆಂಡಿಸೈಟಿಸ್‌ನಿಂದಾಗಿ ರಾಹುಲ್‌ ತಂಡದಿಂದ ಬೇರ್ಪಟ್ಟಿದ್ದರು. ಡೆಲ್ಲಿ ವಿರುದ್ಧ ಅಗರ್ವಾಲ್‌ ತಂಡವನ್ನು ಮುನ್ನಡೆಸಿದ್ದರು. ಇನ್ನು ಟಿ20 ಸ್ಪೆಷಲಿಸ್ಟ್‌ ಆಟಗಾರರನ್ನು ಹೊಂದಿರುವ ರಾಜಸ್ಥಾನ್‌ ಸಾಕಷ್ಟು ಬಲಿಷ್ಠವಾಗಿ ಗೋಚರಿಸುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ಸಾಕಷ್ಟು ಮನರಂಜನೆ ಕ್ರಿಕೆಟ್ ಅಭಿಮಾನಿಗಳಿಗೆ ಸಿಗಲಿದೆ. : :