ಹೊಂಬಾಳೆ ಫಿಲಂಸ್​’ನಿಂದ ಮತ್ತೊಂದು ಚಿತ್ರ: ನಾಳೆ ಟೈಟಲ್, ಪೋಸ್ಟರ್ ರಿಲೀಸ್ ವಿಜಯ್ ಕಿರಗಂದೂರು ಸಾರಥ್ಯದ ಹೊಂಬಾಳೆ ಫಿಲಂಸ್​ ನಿಂದ ಮತ್ತೊಂದು ಹೊಸ ಚಿತ್ರ ಸೆಟ್ಟೇರಲಿದೆ. ಕೊರೋನಾ ಕಾರಣದಿಂದಾಗಿ ಸಾಕಷ್ಟು ಸಿನಿಮಾಗಳ ಕೆಲಸಗಳು ಇನ್ನು ಆರಂಭವಾಗಿಲ್ಲ. ಆದರೆ, ಹೊಂಬಾಳೆ ಫಿಲಂಸ್​ ಮಾತ್ರ ಮೂರು ಹೊಸ ಪ್ರಾಜೆಕ್ಟ್​ಗಳನ್ನು ಪ್ರಕಟಿಸಿದೆ. ಹೊಂಬಾಳೆ ಫಿಲಂಸ್ ಬ್ಯಾನರ್’ನ 12ನೇ ಸಿನಿಮಾದ ಕುರಿತಾಗಿ ಮಾಹಿತಿ ಹೊರಬಿದ್ದಿದೆ. ಸೆ. 22ರಂದು ಮಧ್ಯಾಹ್ನ 3.10ಕ್ಕೆ ಹೊಸ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ಲುಕ್ ಪೋಸ್ಟರ್ ರಿಲೀಸ್ ಆಗಲಿದೆ. ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇತ್ತೀಚೆಗಷ್ಟೆ ರಿಷಭ್​ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಕಾಂತಾರ ಸಿನಿಮಾದ ಪೋಸ್ಟರ್​ ಅನ್ನು ಹೊಂಬಾಳೆ ಫಿಲಂಸ್ ಲಾಂಚ್​ ಮಾಡಿತ್ತು. : , ’ ,