ಅರಮನೆ ಆವರಣದಲ್ಲಿ ರಂಪಾಟ ಮಾಡಿದ ಆನೆ ನಿಯಂತ್ರಿಸಲು ಮಾವುತರು, ಕಾವಾಡಿಗರ ಹರಸಾಹಸ. ಮೈಸೂರು,ಸೆಪ್ಟಂಬರ್,20,2021(..):ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ಆರಂಭವಾಗಿದೆ. ಈ ಮಧ್ಯೆ ಅರಮನೆಗೆ ಸೇರಿದ ಹೆಣ್ಣಾನೆ ಜಮಿನಿ ಚೈನ್ ಕಿತ್ತುಕೊಂಡು ಫುಲ್ ರ್ಯಾಶ್ ಆದ ಘಟನೆ ನಡೆದಿದೆ. ಜಮಿನಿ ಆನೆ ಅರಮನೆ ಆವರಣದಲ್ಲಿ ರಂಪಾಟ ನಡೆಸಿದ್ದು, ಜಮಿನಿ ಆನೆ ರಂಪಾಟದಿಂದ‌ ಅರಮನೆ ಆವರಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆಯಲ್ಲಿ ಜಮಿನಿ ನಿಯಂತ್ರಿಸಲು ಮಾವುತರು, ಕಾವಾಡಿಗರು ಹರಸಾಹಸಪಟ್ಟರು. ಕೊನೆಗೆ ಕ್ಯಾಪ್ಟನ್ ಅಭಿಮನ್ಯು, ಧನಂಜಯ ಆನೆಗಳ ಮೂಲಕ ಜಮಿನಿ ಆನೆಯನ್ನ ನಿಯಂತ್ರಣ ಮಾಡಲಾಯಿತು. : -- – - -