ತಹಸೀಲ್ದಾರ್ ಹುದ್ದೆಯಿಂದ ಮೋಹನ್‌ ಕುಮಾರ್ ಕೆಳಗಿಳಿಸುವಂತೆ ಕೆಎಟಿ ಆದೇಶ. ಮೈಸೂರು,ಸೆಪ್ಟಂಬರ್,20,2021(..):ಹುಣಸೂರು ತಹಸೀಲ್ದಾರ್ ಹುದ್ದೆಗೆ ಅರ್ಹರಲ್ಲ.ತಹಸೀಲ್ದಾರ್ ಹುದ್ದೆಯಿಂದ ಮೋಹನ್‌ ಕುಮಾರ್ ಕೆಳಗಿಳಿಸುವಂತೆ ಕೆಎಟಿ ಆದೇಶ ನೀಡಿದೆ. ಜುಲೈ 23 ರಂದು ಹುಣಸೂರು ತಹಸೀಲ್ದಾರ್ ಆಗಿ ಮೋಹನ್‌ಕುಮಾರ್ ಬಡ್ತಿ ಹೊಂದಿದ್ದರು. ಕೆ.ಆರ್‌.ನಗರ ಚುಂಚನಕಟ್ಟೆ ನಾಡ ಕಚೇರಿಯಲ್ಲಿ ಆರ್‌ಐ ಆಗಿದ್ದ ಅವರನ್ನ. ರಾಜ್ಯ ಸರ್ಕಾರ ಬಡ್ತಿ ನೀಡಿ ಗ್ರೇಡ್ 2 ತಹಸೀಲ್ದಾರ್ ಮಾಡಿತ್ತು.ಇದರ ನಡುವೆ ಗ್ರೇಡ್ 1 ತಹಸೀಲ್ದಾರ್ ಹುದ್ದೆಯಲ್ಲಿ ಕೂರಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಹಿಂದಿನ ತಹಸೀಲ್ದಾರ್ ಬಸವರಾಜು ಕೆಎಟಿ ಮೆಟ್ಟಿಲೇರಿದ್ದರು. ಸದ್ಯ ಗ್ರೇಡ್ 1 ತಹಸೀಲ್ದಾರ್ ಹುದ್ದೆ ನಿರ್ವಹಿಸಲು ಮೋಹನ್‌ಕುಮಾರ್ ಅನರ್ಹ ಎಂದು ಕೆಎಟಿ ಆದೇಶ ಹೊರಡಿಸಿದೆ. ಉಪ ವಿಭಾಗಾಧಿಕಾರಿಗೆ ಅಧಿಕಾರ ಕೊಟ್ಟು ಕಂದಾಯ ಇಲಾಖೆಗೆ ವಾಪಸ್ ಹೋಗುವಂತೆ ಆದೇಶ ಮಾಡಿದೆ. : - - – – -