ರಾಜೀವ್ ಗಾಂಧಿ ಆರೋಗ್ಯ ವಿವಿ ಸರ್ಚ್ ಕಮಿಟಿಗೆ ಎಂಜಿನಿಯರ್ ಓದಿರುವ ಪ್ರೊ.ಎಸ್.ವಿದ್ಯಾಶಂಕರ್ ನೇಮಕವೇಕೆ..? ಮೈಸೂರು,ಸೆಪ್ಟಂಬರ್,20,2021(..):ರಾಜೀವ್ ಗಾಂಧಿ ಆರೋಗ್ಯ ವಿವಿ ಸರ್ಜ್ ಅಂಡ್ ಸೆಲೆಕ್ಷನ್ ಕಮಿಟಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರನ್ನು ನೇಮಕ ಮಾಡಿರುವುದ್ದಕ್ಕೆ ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾಮುವಿವಿ ಕುಲಪತಿಗಳು ಎಂಜಿನಿಯರಿಂಗ್ ಹಿನ್ನೆಲೆ ಹೊಂದಿದ್ದಾರೆ. ಅವರಿಗೂ ರಾಜೀವ್ ಗಾಂಧಿ ಆರೋಗ್ಯ ವಿವಿಗೂ ಏನು ಸಂಬಂಧ. ಯಾವುದೇ ವಿವಿಯ ಸರ್ಚ್ ಕಮಿಟಿಗೆ ನೇಮಕ ಮಾಡುವ ಮುನ್ನ ಆಯಾ ಕ್ಷೇತ್ರದ ಪರಿಣಿತರನ್ನೇ ಆಯ್ಕೆ ಮಾಡಬೇಕು. ಈ ಬಗ್ಗೆ ರಾಜ್ಯಪಾಲರು ಹಾಗೂ ಸಿಎಂಗೆ ಪತ್ರ ಬರೆದಿದ್ದು, ನೇಮಕ ಆದೇಶಕ್ಕೆ ತಡೆ ನೀಡಬೇಕೆಂದು ಒತ್ತಾಯಿಸಿಲಾಗಿದೆ ಎಂದರು. ಹಾಲಿ ಕುಲಪತಿಗಳು ಬೇಡ. ಈಗಾಗಲೇ ಇರುವ ಹಾಲಿ ಕುಲಪತಿಗಳನ್ನು ಸರ್ಚ್ ಕಮಿಟಿಗೆ ನೇಮಕ ಮಾಡುವ ಪ್ರವೃತಿಯನ್ನು ಕೈಬಿಡಬೇಕು. ಹಾಲಿ ಕುಲಪತಿಗಳಾದರೇ ಅವರಿಗೆ ನಿಷ್ಪಕ್ಷಪಾತವಾಗಿ ತೀರ್ಮಾನಗಳನ್ನ ತೆಗೆದುಕೊಳ್ಳಲಾಗದು. ಅವರು ಸರ್ಕಾರದ ಮರ್ಜೆಯಲ್ಲೇ ಇರುತ್ತಾರೆ. ಅದ್ದರಿಂದ ಕುಲಪತಿಗಳ ಆಯ್ಕೆ ಸಮಿತಿಗೆ ವಿಶ್ರಾಂತ ಕುಲಪತಿಗಳನ್ನೇ ನೇಮಕ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾನೂನು ರೂಪಿಸಬೇಕಿದೆ ಎಂದು ಪ್ರೊ. ರಂಗಪ್ಪ ಸಲಹೆ ನೀಡಿದರು. ಮುಂದಿನ ವಾರದಲ್ಲಿ ಪತ್ರಿಕಾಗೋಷ್ಠಿ… ಕರಾಮುವಿವಿ ಅಕ್ರಮಗಳ ಬಗ್ಗೆ ದಾಖಲೆ ಸಂಗ್ರಹ ಮಾಡುತ್ತಿದ್ದೇನೆ. ಮುಂದಿನ ವಾರದಲ್ಲಿ ಸುದ್ದಿಗಾರರೊಂದಿಗೆ ದಾಖಲೆ ಸಮೇತ ಮಾತನಾಡುತ್ತೇನೆ. ನಾನು ವಿಸಿಯಾಗಿದ್ದಾಗ 650 ಕೋಟಿ ಆದಾಯ ಸಂಗ್ರಹ ಮಾಡಿಟ್ಟು ಹೊರಗೆ ಬಂದಿದ್ದೆ. ಆದರೆ, ಕೊನೆಗೆ ನನ್ನನ್ನೇ ವಿಲನ್ ಮಾಡಿದರು. ಹಾಗಾಗಿ ಸದ್ಯ ಈ ಬಗ್ಗೆ ಹೆಚ್ಚಿಗೆ ಏನು ಮಾತನಾಡುವುದಿಲ್ಲ ಎಂದರು. : –- - -. . -. … . . , ?, 20, 2021 (..): -’ . .. . . . , - ? “ , ,” ’ . , “ - . ’ , . , ,” .“ . . . 650 -. . ’ ,” .: / / . . /