ಕೋವಿಡ್ ಲಸಿಕೆ ಅಭಿಯಾನಕ್ಕೆ ನಟಿ ಪ್ರಣೀತಾ ಸಾಥ್ ಬೆಂಗಳೂರು, ಸೆಪ್ಟೆಂಬರ್ 20, 2021 (..):ನಟಿ ಪ್ರಣೀತಾ ಸುಭಾಷ್​ ತಮ್ಮ ಫೌಂಡೇಶನ್ ವತಿಯಿಂದ ಲಸಿಕೆ ಅಭಿಯಾನ ನಡೆಸಿ ಮೆಚ್ಚುಗೆ ಗಳಿಸಿದ್ದಾರೆ. ತಮ್ಮ ಫೌಂಡೇಶನ್ ವತಿಯಿಂದ ನಡೆಸಿದ ಲಸಿಕೆ ಅಭಿಯಾನದ ವಿಡಿಯೋವನ್ನೂ ಸಹ ಇನ್​ಸ್ಟಾಗ್ರಾಂ ಹಾಗೂ ಕೂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಲವರು ಈ ಅಭಿಯಾನದಲ್ಲಿ ಲಸಿಕೆ ಪಡೆದಿದ್ದಾರೆ. ಜನ, ಅಭಿಮಾನಿಗಳು ಪ್ರಣೀತಾ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಜೊತೆ ಕೈಜೋಡಿಸಿ ಬೆಂಗಳೂರಿನ 13 ಕೇಂದ್ರಗಳಲ್ಲಿ ಈ ಲಸಿಕೆಯ ಅಭಿಯಾನ ನಡೆಸಿದ್ದಾರೆ. ಇನ್ನು ಪ್ರತಿ ಕೇಂದ್ರಕ್ಕೂ ಭೇಟಿ ನೀಡಿ, ಜನರಿಗೆ ಉಚಿತವಾಗಿ ಲಸಿಕೆ ವಿತರಿಸುವ ಮೂಲಕ ಅಭಿಯಾನವನ್ನು ಯಶಸ್ವಿಯಾಗಿಸಿದ್ದಾರೆ. :