ವಿಸ್ಮಯ: ಮೃತಪಟ್ಟು 10 ದಿನ ಕಳೆದ್ರೂ ಕೊಳೆಯದ ದೇಹ… ಶಿರಸಿ,ಸೆಪ್ಟಂಬರ್,20,2021(..):ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ ಬೌದ್ಧ ಸನ್ಯಾಸಿಯೊಬ್ಬರು ಮೃತರಾಗಿ ಹತ್ತು ದಿನ ಕಳೆದರೂ ದೇಹ ಕೊಳೆಯದೇ ಯತಾಸ್ಥಿತಿಯಲ್ಲಿರುವ ಮೂಲಕ ವಿಸ್ಮಯ ಮೂಡಿಸಿದೆ. ಕಾಲೋನಿಯ ನಂ.1 ಕ್ಯಾಂಪ್ ನ ಶೇರ್ ಗಾಂದೇನ್ ಬೌದ್ಧ ಮಂದಿರದ ಹಿರಿಯ ಸನ್ಯಾಸಿ ಯಾಸಿ ಪೋಂಟ್ಸ್ (90) ಮೃತರಾದವರಾಗಿದ್ದಾತೆ. ಸೆ. 9 ರಂದು ಇವರು ಕೊಠಡಿಯಲ್ಲಿ ಧ್ಯಾನದಲ್ಲಿ ಇರುವಾಗ ಮೃತರಾಗಿದ್ದು ಈ ವೇಳೆ ಅವರ ದೇಹವನ್ನು ಅದೇ ಕೊಠಡಿಯಲ್ಲಿ ಹಾಗೆಯೇ ಇರಿಸಲಾಗಿದೆ.ಆದರೇ ಹತ್ತು ದಿನ ಕಳೆದಿದ್ದು ದೇಹ ನೀರು ಒಡೆಯುವುದಾಗಲಿ ,ವಾಸನೆ ಬರುವುದಾಗಲಿ,ಕೊಳೆಯುವುದಾಗಲಿ ಆಗದೇ ಯಥಾ ಸ್ಥಿತಿಯಲ್ಲಿ ಇದ್ದಿದ್ದು ಕಂಡು ಬಂದಿದೆ. ಇದೀಗ ಅವರ ದೇಹಕ್ಕೆ ಕಿರಿಯ ಬೌದ್ಧ ಸನ್ಯಾಸಿಗಳು ದೀಪ ಬೆಳಗಿಸುವ ಮೂಲಕ ಪೂಜೆ ಮಾಡಿದ್ದಾರೆ. ಈ ಸನ್ಯಾಸಿಯು ಕ್ಯಾಂಪ್ ನಲ್ಲಿ ಇರುವ ಕಿರಿಯ ಸನ್ಯಾಸಿಗಳಿಗೆ ಧರ್ಮ ಭೋದನೆ ಮಾಡುತಿದ್ದರು. ಇದೀಗ ಅವರು ಮೃತಪಟ್ಟಿದ್ದರೂ ದೇಹ ಯಥಾ ಸ್ಥಿತಿಯಲ್ಲಿ ಇರುವುದರಿಂದ ದೇಹ ಕೊಳೆಯುವವರೆಗೂ ಅವರ ದೇಹ ಅಂತ್ಯಸಂಸ್ಕಾರ ಮಾಡದಿರಲು ಡಿಬೇಟಿಯನ್ ಮುಖಂಡರು ತೀರ್ಮಾನಿಸಿದ್ದಾರೆ. : –- – 10 - … ! 10 !, 20, 2021 (..): , 10 . (90) . 1 . 9 , . 10 , . . . ’ ..: / / 10