ನಾಳೆ (ಸೆ.20) ಸಿಇಟಿ ಫಲಿತಾಂಶ ಪ್ರಕಟ: ದಾಖಲೆಯ ಕಡಿಮೆ ಕಾಲಾವಧಿಯಲ್ಲೇ ಫಲಿತಾಂಶ ಎಂದ ಸಚಿವ ಅಶ್ವತ್ಥನಾರಾಯಣ ಬೆಂಗಳೂರು, ಸೆಪ್ಟೆಂಬರ್ 19, 2021 (..):ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಅಗಸ್ಟ್ 28, 29 & 30ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ನಾಳೆ (ಸೋಮವಾರ) ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, “ದಾಖಲೆಯ ಕಡಿಮೆ ಕಾಲಾವಧಿಯಲ್ಲೇ ಫಲಿತಾಂಶ ಪ್ರಕಟವಾಗುತ್ತದೆ. ಇದಕ್ಕಾಗಿ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ” ಎಂದು ಸಚಿವರು ಹೇಳಿದ್ದಾರೆ. ಫಲಿತಾಂಶವು ನಾಳೆ ಸಂಜೆ 4 ಗಂಟೆ ನಂತರ ಈ ಕೆಳಕಂಡ ಲಿಂಕ್ ನಲ್ಲಿ ಪ್ರಕಟವಾಗಲಿದೆ.://...// : ( 20)