ಮೈಸೂರು ವಿವಿಗೆ ಇಂದು ನ್ಯಾಕ್ ಕಮಿಟಿ ಭೇಟಿ. ಮೈಸೂರು,ಸೆಪ್ಟಂಬರ್,15,2021(..):ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರೀಯ ವೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಷನಲ್ ಅಸೆಸ್‌ಮೆಂಟ್ ಆ್ಯಂಡ್ ಅಕ್ರೆಡೆಸನ್ ಕೌನ್ಸಿಲ್-ನ್ಯಾಕ್) ಇಂದು (ಸೆ.15) ರಂದು ಭೇಟಿ ನೀಡುತ್ತಿದ್ದು, ಎರಡು ದಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಲಿದ್ದಾರೆ. ಪ್ರತಿ ಐದು ವರ್ಷಕ್ಕೊಮ್ಮೆ ನ್ಯಾಕ್ ವಿವಿಗಳಿಗೆ ಭೇಟಿ ನೀಡುವುದು ವಾಡಿಕೆ. 2014ರಿಂದ 2019ರವರೆಗೆ ನೀಡಿದ ಡೇಟಾವನ್ನೇ ನ್ಯಾಕ್ ಕಮಿಟಿ ಪರಿಗಣಿಸಲಿದೆ. 700 ಅಂಕಕ್ಕೆ ಈಗಾಗಲೇ ವರದಿ ಕಳುಹಿಸಲಾಗಿದೆ. ನ್ಯಾಕ್ ಕಮಿಟಿ ಉಳಿದ 300 ಅಂಕವನ್ನು ನೀಡುತ್ತದೆ. ಒಂದೂವರೆ ತಿಂಗಳಿನಿಂದ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಮೊದಲಿಗೆ ಮೂಲ ಸೌಕರ್ಯವನ್ನು ನೋಡುತ್ತಾರೆ. 10 ವಿಭಾಗವನ್ನು ಅವರೇ ಆಯ್ಕೆ ಮಾಡಿಕೊಂಡು ಭೇಟಿ ನೀಡುತ್ತಾರೆ. ಸಂಶೋಧನಾ ಸೌಲಭ್ಯ, ಕ್ರೀಡಾಂಗಣ, ಆ್ಯಂಪಿ ಥಿಯೇಟರ್ ಎಲ್ಲವನ್ನೂ ವೀಕ್ಷಣೆ ಮಾಡಲಿದ್ದಾರೆ. 7 ಜನರು ಒಂದೊಂದು ತಂಡವಾಗಿ ಬೇರೆ ಬೇರೆ ಕಡೆ ಭೇಟಿ ನೀಡಲಿದ್ದಾರೆ. ಅಧ್ಯಾಪಕರು, ಹಳೆಯ ವಿದ್ಯಾರ್ಥಿಗಳು, ಪೋಷಕರೊಂದಿಗೂ ಮಾತುಕತೆ ನಡೆಸುತ್ತಾರೆ. ಈ ಬಾರಿ ಗ್ರೇಡ್ ವಿಧಾನ ಬದಲಾಗಿದೆ. ಎ ಪ್ಲಸ್‌ ಪ್ಲಸ್ ಅತ್ಯುನ್ನತ ದರ್ಜೆ. ನಂತರದ್ದು ಎ ಪ್ಲಸ್, ಎ, ಬಿ ಮುಂತಾದ ಗ್ರೇಡ್‌ ಗಳಿದೆ. ಹಾಗಾಗಿ ಎ ಪ್ಲಸ್‌ ಪ್ಲಸ್ ಗ್ರೇಡ್ ಪಡೆಯುವುದು ನಮ್ಮ ಗುರಿ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. : – -- - …. , 15, 2021 (..): () . - . . 2014 2019 . 700 , 300 . . . , , -. 7 , , . . , ‘++’ , ‘+’, ‘’, ‘’, . ‘++’ .: / / / /