ಸರ್ಕಾರಿ ನಿವಾಸದಲ್ಲಿದ್ದ 10ಕ್ಕೂ ಹೆಚ್ಚು ಮರಕ್ಕೆ ಕತ್ತರಿ ಆರೋಪ: ಮಂಡ್ಯ ಎಸ್ಪಿ ವಿರುದ್ಧ ಕ್ರಮಕ್ಕೆ ಆಗ್ರಹ. ಮಂಡ್ಯ,ಸೆಪ್ಟಂಬರ್,14,2021(..):ಸರ್ಕಾರ ಮತ್ತು ಇಲಾಖೆಯ ಅನುಮತಿ ಪಡೆಯದೇ ಸರ್ಕಾರಿ ನಿವಾಸದಲ್ಲಿದ್ದ 10ಕ್ಕೂ ಹೆಚ್ಚು ಮರಗಳನ್ನ ಕಡಿಸಿದ್ದಾರೆ. ಜತೆಗೆ ಅನುಮತಿ ಪಡೆಯದೇ ಸರ್ಕಾರಿ ನಿವಾಸ ನವೀಕರಣ ಮಾಡಿರುವ ಆರೋಪ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಅವರ ವಿರುದ್ದ ಕೇಳಿ ಬಂದಿದೆ. ಯಾರ ಅನುಮತಿಯನ್ನು ಪಡೆಯದೆ ಸರ್ಕಾರಿ ನಿವಾಸದಲ್ಲಿದ್ದ 10ಕ್ಕೂ ಹೆಚ್ಚು ಮರಗಳನ್ನು ಕಡಿಸಿ ಮಂಡ್ಯ ಪೊಲೀಸ್​ ವರಿಷ್ಠಾಧಿಕಾರಿ ಡಾ.ಅಶ್ವಿನಿ ಅವರು ಕಾನೂನು ಉಲ್ಲಂಘಿಸಿದ್ದಾರೆ. ಅಲ್ಲದೆ ಮರ ಕಡಿದು, ಸಾಗಿಸಲು ಪೊಲೀಸ್ ವಾಹನ ಹಾಗೂ ತರಬೇತಿ ನಿರತ ಪೊಲೀಸರನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಎಸ್ಪಿ ಅಶ್ವಿನಿ ಅವರ ವಿರುದ್ಧ ತಿಂಗಳ ಹಿಂದೆಯೂ 50ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಮಾಡಿರುವ ಆರೋಪವಿದೆ. ಪೊಲೀಸ್ ಮೈದಾನದಲ್ಲಿದ್ದ 50ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಮಾಡಿದ್ದಾರೆನ್ನಲಾಗಿದೆ. ಇನ್ನು ಕೋವಿಡ್ ಸಂಕಷ್ಟದ ವೇಳೆಯೂ ಸರ್ಕಾರದ ಅನುಮತಿ ಪಡೆಯದೇ ಮನೆ, ಕಚೇರಿ ನವೀಕರಣ ಮಾಡಿಸಿರುವ ಆರೋಪವು ಕೇಳಿ ಬಂದಿದೆ. ವಾಸ್ತುಗಾಗಿ ಸರ್ಕಾರಿ ವಸತಿ ಗೃಹದ ಗಾರ್ಡ್ ಕೊಠಡಿ ಧ್ವಂಸ, ಗೇಟ್ ಬದಲಾವಣೆ. ಆಧುನಿಕವಾಗಿ ಕಚೇರಿ, ಮನೆ ನವೀಕರಣ ಸೇರಿ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಕೊವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿರುವುದಲ್ಲದೆ, ಕೋವಿಡ್ ಸಂದರ್ಭದಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಈಹಿನ್ನೆಲೆಯಲ್ಲಿ ಎಸ್ಪಿ ಅಶ್ವಿನಿ ಅವರ ವಿರುದ್ಧ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. … 10 . : , 14, 2021 (..): . , 10 . . 10 - . 50 . . -19 . ‘’ . , . , -19 . . .: / . / / 10 / / : -10 –- –-