ದೇಗುಲಗಳ ತೆರವು ವಿಚಾರ: ಜನರ ಭಾವನೆಗೆ ನೋವಾಗದಂತೆ ಕೆಲಸ ಮಾಡಬೇಕು- ಶಾಸಕ ಸಾ.ರಾ ಮಹೇಶ್. ಬೆಂಗಳೂರು,ಸೆಪ್ಟಂಬರ್,14,2021(..):ದೇವಾಲಯಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಜನರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಸಾ.ರಾ ಮಹೇಶ್, ದೇಗುಲ, ಧಾರ್ಮಿಕ ವಿಷಯಗಳಲ್ಲಿ ಜನರಿಗೆ ಭಾವನಾತ್ಮಕ ಸಂಬಂಧ ಇರುತ್ತದೆ. ಜನರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡದೆ ಜನರ ಭಾವನೆಗೆ ನೋವಾಗದಂತೆ ಕೆಲಸ ಮಾಡಬೇಕು ಎಂದರು. ಯಾವುದೇ ದೇಗುಲ, ಚರ್ಚ್, ಮಸೀದಿ ತೆರವಿಗೂ ಮುನ್ನ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಂಡರೇ ಗೊಂದಲ ಸೃಷ್ಠಿಯಾಗಲ್ಲ ಎಂದು ಶಾಸಕ ಸಾ.ರಾ ಮಹೇಶ್ ತಿಳಿಸಿದರು. : – - – –--- .