ದೇಗುಲದಲ್ಲಿ ಕಳ್ಳರ ಕೈಚಳಕ: ಹುಂಡಿ ಹಣ ದೋಚಿ ಪರಾರಿ. ಮೈಸೂರು,ಸೆಪ್ಟಂಬರ್,12,2021(..):ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕುರುಬರ ಹೊಸಹಳ್ಳಿ ಗ್ರಾಮದಲ್ಲಿನ ದಂಡು ಮಾರಮ್ಮ ದೇಗುಲದಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ನಡೆದಿದೆ. ಕುರುಬರ ಹೊಸಹಳ್ಳಿಯ ದಂಡು ಮಾರಮ್ಮ ದೇಗುಲದಲ್ಲಿ ಬಾಗಿಲು ಹಾಕಿದ್ದಾಗ ಕಳ್ಳರು ಈ ಕೃತ್ಯವೆಸಗಿದ್ದಾರೆ. ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನ ದೋಚಿ ಪರಾರಿಯಾಗಿದ್ದಾರೆ. ಇದೇ ದೇವಸ್ಥಾನದಲ್ಲಿ ಆರರಿಂದ ಏಳು ಬಾರಿ ಕಳ್ಳತನವಾಗಿದೆ ಎನ್ನಲಾಗಿದೆ. ಹಬ್ಬದ ಹಿನ್ನೆಲೆ ಆಭರಣದ ಆಸೆಗಾಗಿ ಕಳ್ಳರು ಕಳ್ಳತನ ಮಾಡಲು ಬಂದಿದ್ದರು. ಆದರೆ ಗ್ರಾಮಸ್ಥರು ಆಭರಣ ಹಬ್ಬದ ದಿನವೇ ತೆಗೆದಿಟ್ಟಿದ್ದರು. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - --