ಬೈಕ್ ಮತ್ತು ಗೂಡ್ಸ್ ನಡುವೆ ಅಪಘಾತ: ಸವಾರರಿಬ್ಬರು ಸ್ಥಳದಲ್ಲೇ ಸಾವು. ಮೈಸೂರು,ಸೆಪ್ಟಂಬರ್,12,2021(..): ಬೈಕ್ ಮತ್ತು ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಎಚ್.ಡಿ.ಕೋಟೆ ತಾಲೋಕಿನ ಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬೈಕ್ ಸವಾರರ ಪೈಕಿ ಮೃತ ಲೋಕೇಶ್ ವಿವಾಹಕ್ಕೆ ಎರಡೇ ದಿನ ಬಾಕಿ ಉಳಿದಿತ್ತು. ವಿವಾಹದ ಸಿದ್ದತೆಯಲ್ಲಿ ಲೋಕೇಶ್ ಮತ್ತವನ ಸ್ನೇಹಿತ ಬಟ್ಟೆ ಖರೀದಿಸಲು ಮೈಸೂರಿಗೆ ತೆರಳಿದ್ದರು. ಮೈಸೂರಿನಿಂದ ವಾಪಸ್ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - – - –