ಮತ್ತೆ ಕಿರುತೆರೆಗೆ ಗೋಲ್ಡನ್ ಸ್ಟಾರ್ ಗಣೇಶ್ ! ಬೆಂಗಳೂರು, ಸೆಪ್ಟೆಂಬರ್ 13, 2021 (..):ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಹೌದು. ಮತ್ತೆ ಕಿರುತೆರೆಯ ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲು ಗಣೇಶ ಬರುತ್ತಿದ್ದಾರೆ. ಈ ಬಾರಿ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೆ ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಮಿನಿಟ್ಸ್ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಗಣೇಶ್, ಈ ಬಾರಿ ಜೀ ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಂಕರ್ ಆಗಿ ಕಿರುತೆರೆಗೆ ಬಂದಿದ್ದ ಗಣೇಶ್ ಕಲರ್ಸ್ ಕನ್ನಡದಲ್ಲಿ ಕಾಣಿಸಿಕೊಂಡ ಬಳಿಕ ಕೆಲ ವರ್ಷಗಳಿಂದ ಕಿರುತೆರೆಯಿಂದ ದೂರವಾಗಿದ್ದರು. :