ದೇವಾಲಯ ಒಡೆದರೆ ಜನರ ಎದೆಗೆ ಒದ್ದಂತೆ, ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದ ಜಿಟಿ ದೇವೇಗೌಡ ಮೈಸೂರು, ಸೆಪ್ಟೆಂಬರ್ 13, 2021 (..):ಹಿಂದೂ ದೇವಾಲಯಗಳ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವಿರುದ್ದ ಶಾಸಕ ಜಿ.ಟಿ.ದೇವೆಗೌಡ ಕಿಡಿಕಾರಿದ್ದಾರೆ. ಜನರು ದಂಗೆ ಎದ್ದರೆ ನೀವು ಉಳಿತೀರಾ? ಜನರ ತಾಳ್ಮೆಯನ್ನ ಪರೀಕ್ಷೆ ಮಾಡಬೇಡಿ. ಅಧಿಕಾರಿಗಳು ಸುಪ್ರೀಂ ತೀರ್ಪನ್ನು ಅಧ್ಯಯನ ಮಾಡಬೇಕು ಎಂದು ಜಿಟಿಡಿ ಸಲಹೆ ನೀಡಿದ್ದಾರೆ. ಹಿಂದೂ ಧರ್ಮ‌ ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳ ಮೇಲೆ‌ ನಂಬಿಕೆ ಇಟ್ಟಿದೆ. ದೇವಾಲಯಗಳನ್ನ ಒಡೆದರೆ ಜನರ ಎದೆಗೆ ಒದ್ದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಗುಲಗಳು ಮಾತ್ರವಲ್ಲ. ಕೆರೆಗಳ ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೂ ಗೌರವ ತಂದು ಕೊಡಬೇಕು ಎಂದು ಜಿಲ್ಲಾಧಿಕಾರಿ ವಿರುದ್ದ ಶಾಸಕ ಜಿ.ಟಿ.ದೇವೆಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. :