ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೆ.27 ರಂದು ಕರ್ನಾಟಕ ಬಂದ್- ಕುರುಬೂರು ಶಾಂತಕುಮಾರ್. ಮೈಸೂರು,ಸೆಪ್ಟಂಬರ್,11,2021(..):ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೆಪ್ಟೆಂಬರ್ 27ಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಕರ್ನಾಟಕ ಬಂದ್ ​ಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಬೆಂಬಲ ನೀಡುತ್ತಿದೆ. ಸೆಪ್ಟಂಬರ್ 27ಕ್ಕೆ ಕರ್ನಾಟಕ ಬಂದ್ ಮಾಡಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಕುರುಬೂರು ಶಾಂತಕುಮಾರ್, ದೇಶದಲ್ಲಿ ಆಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರ ಜೀವನದ ಮೇಲೆ ಹೊಡೆತ ಬಿದ್ದಿದೆ. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು. ಕಬ್ಬು ಬೆಳೆಗಾರಿಗೆ ನ್ಯಾಯ ಸಿಗಬೇಕು. ಕಬ್ಬಿನ ಬೆಲೆ ಪರಿಷ್ಕರಣೆ ಆಗಬೇಕಿದೆ. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. ಹೀಗಾಗಿ ಸೆ.27 ರಂದು ಕರ್ನಾಟಕ ಬಂದ್ ಗೆ ಕರೆ ನಿಡಲಾಗಿದೆ. ಆನೇಕ ಸಂಘಟನೆಗಳು ಬಂದ್​ಗೆ ಬೆಂಬಲ‌ ನೀಡಿವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. … . 27 .’ – , 11, 2021 (..): ’ () 27 . ’ , . . “ ’ ,” . , . , .: ’ / / / / 27 : - . 27 – –- .