ದಿಲ್ಲಿಯಲ್ಲಿ ಸಂಸದರಿಗಾಗಿ ‘ತಲೈವಿ’ ಸ್ಪೆಷಲ್ ಶೋ! ಬೆಂಗಳೂರು, ಸೆಪ್ಟೆಂಬರ್ 11, 2021 (..):ಸಂಸದರಿಗಾಗಿ ದೆಹಲಿಯಲ್ಲಿ ‘ತಲೈವಿ’ ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಿದ ಕ್ವೀನ್ ಕಂಗನಾ! ಹೌದು. ಕಂಗನಾ ಸಿನಿಮಾ ತಲೈವಿ ಇಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ಇದಕ್ಕೂ ಮುನ್ನ ಸಂಸದರಿಗಾಗಿ ದಿಲ್ಲಿಯಲ್ಲಿ ಸ್ಪೆಷಲ್ ಶೋ ಏರ್ಪಡಿಸಿದ್ದರು. ಜತೆಗೆ ಇನ್‌ಸ್ಟಾಗ್ರಾಮ್’ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕಾಗಿ ‘ಜಯಲಲಿತಾ’ ಪಾತ್ರವನ್ನು ನಿರ್ವಹಿಸಲು ತನ್ನ ಪ್ರಯಾಣವನ್ನು ತೆರೆದಿಟ್ಟಿದ್ದಾರೆ ಕಂಗನಾ.