ಮೇಕೆದಾಟು ಯೋಜನೆ ವಿವಾದ: ಅಣ್ಣಾಮಲೈಗೆ ಮತ್ತೆ ಟಾಂಗ್ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಸೆಪ್ಟಂಬರ್,9,2021(..):ಮೇಕೆದಾಟು ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿ ಉಪವಾಸ ಕುಳಿತಿದ್ದ ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈಗೆ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ಟಾಂಗ್ ನೀಡಿದ್ದಾರೆ. ಯಾರಾದ್ರೂ ಉಪವಾಸ ಕೂರಲಿ, ಏನಾದ್ರೂ ಮಾಡಲಿ. ನಮ್ಮ ನೀರು ನಾವು ಬಳಸಿಕೊಳ್ಳಲು ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಅಣ್ಣಾಮಲೈಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಇನ್ನು ಮುಂದಿನ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎಂಬ ಕೇಂದ್ರಗೃಹ ಸಚಿವ ಅಮಿತ್ ಶಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಬಿಜೆಪಿ ವರಿಷ್ಠರ ಮಾತುಗಳಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಸಿಎಂ ಮಾಡಿದ್ದಾರೆ. ನಾನು ಮೊದಲು ಕಾರ್ಯಕರ್ತರ. ನಂತರ ಮುಖ್ಯಮಂತ್ರಿ. ಕಾರ್ಯಕರ್ತನಾಗಿ ವರಿಷ್ಠರ ವಿಶ್ವಾಸ ಪಡೆದ ಬಳಿಕ ಸಿಎಂ ಆಗಿದ್ದೇನೆ. ಹಿರಿಯರ ಮಾರ್ಗದರ್ಶನ ಸಲಹೆ ಸ್ವೀಕರಿಸುತ್ತೇನೆ ಎಂದು ತಿಳಿಸಿದರು. : –- – - –-- -.