ಪ್ಯಾರಾ ಒಲಿಂಪಿಯನ್ನರಿಗೆ ಇಂದು ಪ್ರಧಾನಿ ಮೋದಿ ಆತಿಥ್ಯ ಬೆಂಗಳೂರು, ಸೆಪ್ಟೆಂಬರ್ 09, 2021 (..):ಪ್ರಧಾನಿ ನರೇಂದ್ರ ಮೋದಿ ಇಂದು ಪ್ಯಾರಾಲಿಂಪಿಕ್ಸ್ ನ ಭಾರತೀಯ ತಂಡವನ್ನು ಭೇಟಿ ಮಾಡಲಿದ್ದಾರೆ. ಮೋದಿ ಇಂದು ಪ್ಯಾರಾ ಒಲಿಂಪಿಯನ್ನರಿಗೆ ಆತಿಥ್ಯ ವಹಿಸಲಿದ್ದಾರೆ. ಕಳೆದ ಭಾನುವಾರ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈವಿಷಯವನ್ನು ಪ್ರಕಟಿಸಿದ್ದರು. ಈ ಹಿಂದೆ ‘ಒಲಿಂಪಿಯನ್ ಗಳು ಭಾರತಕ್ಕೆ ಬಂದಾಗ ಪ್ರಧಾನಿ ಆತಿಥ್ಯ ವಹಿಸಿದ್ದರು, ಮತ್ತು ಪ್ಯಾರಾಲಿಂಪಿಯನ್ನರಿಗೆ ಆತಿಥ್ಯ ವಹಿಸಲಿದ್ದಾರೆ. ಬೇಸಿಗೆ ಪ್ಯಾರಾಲಿಂಪಿಕ್ಸ್ ನ ಭಾರತೀಯ ತಂಡವನ್ನು ಭೇಟಿ ಮಾಡಲು ಮೋದಿ ಉತ್ಸುಕರಾಗಿದ್ದಾರೆ. :