ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು: ಓರ್ವನಿಗೆ ಗಾಯ. ಮೈಸೂರು,ಸೆಪ್ಟಂಬರ್,8,2021(..):ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವನ್ನಪ್ಪಿ ಮತ್ತೊಬ್ಬ ಕಾರ್ಮಿಕನಿಗೆ ಗಾಯಗಳಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಬೋಗಾದಿಯಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ ಮೂಲದ ಹನುಮಂತ ಮೃತಪಟ್ಟ ಕೂಲಿ ಕಾರ್ಮಿಕ. ಕಟ್ಟಡ ನಿರ್ಮಾಣ ವೇಳೆ ಈ ಘಟನೆ ನಡೆದಿದೆ. ಕೆಲಸ ಮಾಡುತ್ತಿದ್ದ ವೇಳೆ ಹನುಮಂತ ವಿದ್ಯುತ್ ಸಂಪರ್ಕಿಸಿ ಮೊದಲ ಮಹಡಿಯಿಂದ ಕೆಳಬಿದ್ದಿದ್ದು, ಹನುಮಂತನ ಮೇಲೆ ಬಿದ್ದ ಮತ್ತೊಬ್ಬ ಕೂಲಿ ಕಾರ್ಮಿಕ ಬಿದ್ದಿದ್ದಾರೆ. ಹನುಮಂತನ ಮೇಲೆ ಬಿದ್ದ ಕಾರ್ಮಿಕ ಪ್ರಾಣಾಯದಿಂದ ಪಾರಾಗಿದ್ದು, ಪ್ರಾಣಾಯದಿಂದ ಪಾರಾದ ಕೂಲಿ ಕಾರ್ಮಿಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - – -.