ಮುಡಾ () ದಿಂದ ಗುಂಪು ವಸತಿ ಮನೆಗಳ ಡಿಮ್ಯಾಂಡ್ ಸರ್ವೆಗೆ ಮೊಬೈಲ್ ಆ್ಯಪ್ ..! ಮೈಸೂರು, ಸೆ.08, 2021 : (.. ) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕರ ಅಭಿಪ್ರಾಯ, ಬೇಡಿಕೆ ಹಾಗೂ ಇಚ್ಚೆಯ ಆಧಾರದ ಮೇಲೆ ಗುಂಪು ವಸತಿ ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು ಈ ಕಾರಣದಿಂದ ಸಾರ್ವಜನಿಕರಿಂದ ಮನೆ ಬೇಡಿಕೆ ಸಮೀಕ್ಷೆಗೆ ‘ಮೊಬೈಲ್ ಆ್ಯಪ್ ‘ ಸಿದ್ಧಪಡಿಸಿದೆ. ಮನೆಗಳನ್ನು ನಿರ್ಮಿಸಿ, ವಸತಿ ರಹಿತರಿಗೆ ಹಂಚಿಕೆ ಮಾಡಲು ಉದ್ದೇಶಿಸಿರುವ ಮುಡಾ ( - ), ಪ್ರಾಧಿಕಾರದಿಂದ ರಚಿತವಾದ ಬಡಾವಣೆಗಳಾದ ವಿಜಯನಗರ ಮತ್ತು ದಟ್ಟಗಳ್ಳಿ ಬಡಾವಣೆಯಲ್ಲಿ ಎರಡು ಕೊಠಡಿ ಮನೆಗಳು ಹಾಗೂ ಸಾತಗಳ್ಳಿ ಬಡಾವಣೆಗಳಲ್ಲಿ ಒಂದು ಕೊಠಡಿಯ 14 ಅಂತಸ್ತಿನ 1960 ವಸತಿ ಸಮುಚ್ಚಯಗಳನ್ನು 450.00 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಿದೆ. ಸದರಿ ಗುಂಪು ವಸತಿ ಮನೆಗಳನ್ನು ನಿರ್ಮಾಣ ಮಾಡಲು ಸಾರ್ವಜನಿಕರಿಂದ ಅಭಿಪ್ರಾಯವನ್ನು ಪಡೆದು, ಅವರ ಬೇಡಿಕೆ ಹಾಗೂ ಇಚ್ಚೆಯ ಆಧಾರದ ಮೇಲೆ ಮನೆಯನ್ನು ನಿರ್ಮಿಸಲು ಉದ್ದೇಶಿಸಿದೆ. ಈ ಕಾರಣದಿಂದ ಸಾರ್ವಜನಿಕರಿಂದ ಮನೆ ಬೇಡಿಕೆ ಸಮೀಕ್ಷೆ ಕೈಗೊಳ್ಳಲಾಗಿದೆ. ಸದರಿ ಬೇಡಿಕೆ ಸಮೀಕ್ಷೆಯಲ್ಲಿ ಸುಮಾರು 22 ವಿವಿಧ ಅಂಶಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಅದರ ಆಧಾರದ ಮೇಲೆ ಮನೆಯ ವಿನ್ಯಾಸ ಅಂತಿಮಗೊಳಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುವುದು. ಸಾರ್ವಜನಿಕರು ತಮಗೆ ಯಾವ ರೀತಿ ಮನೆ ವಿನ್ಯಾಸ ಅಗತ್ಯವಿದೆ ಎಂಬ ಬಗ್ಗೆ ಸಮೀಕ್ಷೆಯಲ್ಲಿ ನೋಂದಾಯಿಸಿಕೊಂಡು ನಮೂದಿಸಲು ಕೋರಿದೆ. ಬೇಡಿಕೆ ಸಮೀಕ್ಷೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾಗುವ ಆಸಕ್ತಿಯನ್ನಾಧರಿಸಿ ಇನ್ನು ಹೆಚ್ಚಿನ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಬೇಡಿಕೆ ಸಮೀಕ್ಷೆಯಲ್ಲಿ ಆನ್‌ಲೈನ್‌ (ವೆಬ್‌ಸೈಟ್ ಹಾಗೂ ಮೊಬೈಲ್ ಆಪ್) ಮೂಲಕ ಮತ್ತು ಆಫ್‌ಲೈನ್ ಮೂಲಕ ಭಾಗವಹಿಸಬಹುದಾಗಿದೆ ಎಂದು ಮುಡಾ ( - ) ಆಯುಕ್ತ ಡಾ.ನಟೇಶ್ ಮಾಹಿತಿ ನೀಡಿದ್ದಾರೆ. … , 8, 2021 (..): () , , . , . ’ , . , 1 . 1960 14 1 . 450 . . 22 , . . . ( ) , . .: / / / / : - ------