ಮೈಸೂರು ದಸರಾ ಮಹೋತ್ಸವ: ಈ ಬಾರಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳನ್ನ ಕರೆತರಲು ನಿರ್ಧಾರ. ಮೈಸೂರು,ಸೆಪ್ಟಂಬರ್,8,2021(..):ಕೊರೋನಾ ಹಿನ್ನೆಲೆ ಈ ಬಾರಿಯೂ ಸರಳವಾಗಿ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು ಈ ಬಾರಿಯ ದಸರಾದಲ್ಲಿ ಎಂಟು ಆನೆಗಳು ಭಾಗಿಯಾಗಲಿವೆ. 16 ರ ಪಟ್ಟಿಯಲ್ಲಿ 8 ಆನೆಗಳ ಆಯ್ಕೆ ಖಚಿತವಾಗಿದ್ದು, 8 ಆನೆಗಳನ್ನು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಆನೆಗಳ ಪಟ್ಟಿಯನ್ನ ಪ್ರಕಟ ಮಾಡಲಿದ್ದಾರೆ. ದಸರಾ ಆನೆಗಳ ಪಟ್ಟಿ ಹಾಗೂ ಆನೆಗಳ ಬಗ್ಗೆ ತಯಾರಿಸಿರುವ ಕೈಪಿಡಿಯನ್ನ ಇಂದು ಬಿಡುಗಡೆ ಮಾಡಲಾಗುತ್ತದೆ. ಇನ್ನು ಸೆಪ್ಟಂಬರ್ 13ರಂದೇ ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ ಎನ್ನಲಾಗುತ್ತಿದ್ದು, ಸೆಪ್ಟಂಬರ್ 16 ರಂದು ಅಂಬಾವಿಲಾಸ ಅರಮನೆಗೆ ಗಜಪಡೆ ಎಂಟ್ರಿ ಕೊಡಲಿದೆ. ಕ್ಯಾಪ್ಟನ್ ಅಭಿಮನ್ಯು ತನ್ನ ತಂಡದೊಂದಿಗೆ ಎಂಟ್ರಿ ಕೊಡಲಿದ್ದಾನೆ. ಕೊರೊನಾ ಕಾರಣ ಈ ಬಾರಿಯೂ ಸರಳ, ಸಂಪ್ರದಾಯಿಕ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಅಂಗಳಕ್ಕಷ್ಟೇ ದಸರಾ ಸೀಮಿತವಾಗಲಿದೆ. ಸೆ.10 ರ ನಂತರ ಮೈಸೂರಿಗೆ ಗಜಪಯಣದ ಮೂಲಕ ಆನೆಗಳನ್ನ ಕರೆತರಲು ಸಿದ್ಧತೆ ನಡೆಸಲಾಗುತ್ತಿದೆ. ಡಿಸಿಎಫ್ ಕರಿಕಾಳನ್ ಆನೆ ಶಿಬಿರಕ್ಕೆ ಭೇಟಿ ಕೊಟ್ಟು 16 ಆನೆಗಳ ಆರೋಗ್ಯ ಸ್ಥಿತಿ ಪರಿಶೀಲಿಸಿ, ತಾತ್ಕಾಲಿಕ ಪಟ್ಟಿ ತಯಾರಿಸಿ, ಬೆಂಗಳೂರಿನ ಪಿಸಿಸಿಎಫ್ ಕಚೇರಿಗೆ ರವಾನಿಸಿದ್ದರು.ಇದೀಗ ಅಭಿಮನ್ಯು ನೇತೃತ್ವದಲ್ಲಿ 8 ಆನೆ ಬಳಸಿಕೊಳ್ಳಲು ಪಿಸಿಸಿಎಫ್ ಅನುಮತಿ ನೀಡಿದ್ದಾರೆ. ಕಳೆದ ವರ್ಷದ ದಸರಾಗೆ ಮೂರು ಗಂಡಾನೆ, ಎರಡು ಹೆಣ್ಣಾನೆಯನ್ನಷ್ಟೇ ಕರೆತರಲಾಗಿತ್ತು. ಈ ಬಾರಿ ಎರಡು ಗಂಡಾನೆ ಹಾಗೂ ಒಂದು ಹೆಣ್ಣಾನೆಯನ್ನು ಹೆಚ್ಚುವರಿಗೆ ಕರೆ ತರಲಾಗುತ್ತದೆ. ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆ ಸ್ಥಾನ ಪಡೆಯುವುದು ಖಚಿತವಾಗಿದೆ. … : 8 , 8, 2021 (..): - . , . 16 . - .. . . ‘’ 13 16. . 16 8 . , 8 , . . . 5 3 .: // / 8 : - – - -8 – .