ಪ್ರತಿಷ್ಠಿತ ಲಂಡನ್ ಚಲನಚಿತ್ರೋತ್ಸವಕ್ಕೆ ರಿಷಬ್ ಶೆಟ್ಟಿಯ ‘ಪೆಡ್ರೋ’ ಆಯ್ಕೆ ಬೆಂಗಳೂರು, ಸೆಪ್ಟೆಂಬರ್ 8, 2021 (..):‘ಪೆಡ್ರೋ’ ಸಿನಿಮಾ ಈಗ ಇನ್ನೊಂದು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ ಎಂಬ ಸುದ್ದಿಯನ್ನು ಸ್ವತಃ ರಿಷಬ್ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು. ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ಲಂಡನ್ ಚಲನಚಿತ್ರೋತ್ಸವದಲ್ಲಿ ಪೆಡ್ರೋ ಸಿನಿಮಾ ಪ್ರದರ್ಶನ ಕಾಣುತ್ತಿದೆ. ನಮ್ಮ ನಿರ್ಮಾಣದ ಚಿತ್ರ ‘ಪೆಡ್ರೋ’ ಇದೀಗ ಪ್ರತಿಷ್ಠಿತ ಲಂಡನ್ ಚಲನಚಿತ್ರೋತ್ಸವಕ್ಕೆ ಆಯ್ಕೆಗೊಂಡಿದ್ದು ಸಂತಸ ತಂದಿದೆ. ನಿರ್ದೇಶಕ ನಟೇಶ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು.” ಎಂದು ಪೋಸ್ಟ್ ಹಾಕಿದ್ದಾರೆ. ಅಂದಹಾಗೆ ಇದಕ್ಕೂ ಮುಂಚೆ ದಕ್ಷಿಣ ಕೊರಿಯಾದ ಪ್ರಖ್ಯಾತ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪೆಡ್ರೋ ಸಿನಿಮಾ ಆಯ್ಕೆಯಾಗಿತ್ತು. : ’ ‘’