ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್‌ ಶ್ರೇಯಾಂಕ: ಶೆಫಾಲಿ @1, ಸ್ಮೃತಿ ಮಂಧಾನ @3 ಬೆಂಗಳೂರು, ಸೆಪ್ಟೆಂಬರ್ 8, 2021 (..):ಯುವ ಬ್ಯಾಟ್ಸ್‌ಮನ್‌ ಶೆಫಾಲಿ ವರ್ಮಾ ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಆಲ್ ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ನಟಾಲಿಯಾ ಸೈವರ್ ಮತ್ತು ನ್ಯೂಜಿಲೆಂಡ್‌ನ ಮೇಗನ್ ಶುಟ್ ಜಂಟಿಯಾಗಿ ನಂ.1 ಸ್ಥಾನ ಅಲಂಕರಿಸಿದ್ದಾರೆ. 759 ರೇಟಿಂಗ್ ಪಾಯಿಂಟ್ಸ್ ಗಳಿಸಿರುವ ಶೆಫಾಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾದ ಬೆತ್ ರೂನಿ (744) 2ನೇ ಸ್ಥಾನ, ಭಾರತದ ಸ್ಮೃತಿ ಮಂಧಾನ (716) 3ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ 1. ಇಂಗ್ಲೆಂಡ್‌ನ ಸೋಫಿ ಡಿವೈನ್, 2. ಆಸ್ಟ್ರೇಲಿಯಾದ ಮೇಗನ್ ಶಟ್, 3. ಇಂಗ್ಲೆಂಡ್‌ನ ಸಾರಾ ಗ್ಲೆನ್, 4. ಆಸ್ಟ್ರೇಲಿಯಾದ ಜೆನ್ ಜೊನಾಸೆನ್, 5. ದಕ್ಷಿಣ ಆಫ್ರಿಕಾದ ಸಬ್ನಿಮ್ ಇಸ್ಮಾಯಿಲ್, 6. ಭಾರತದ ದೀಪ್ತಿ ಶರ್ಮಾ, 7. ಇಂಗ್ಲೆಂಡ್‌ನ ಕತರಿನಾ ಬ್ರಂಟ್, 8. ಪೂನಂ ಯಾದವ್, 9. ಪಾಕಿಸ್ತಾನದ ಆನಂ ಅಮೀನ್, 10. ಆಸ್ಟ್ರೇಲಿಯಾದ ಜಾರ್ಜಿಯಾ ವೇರ್ಹ್ಯಾಮ್ ಸ್ಥಾನ ಪಡೆದಿದ್ದಾರೆ. : ’ T20 : @ 1, @ 3