ಗಣೇಶ ಚತುರ್ಥಿಯಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಗಳೂರು, ಸೆಪ್ಟೆಂಬರ್ 07, 2021 (..):ಮುಂದಿನ ಚಿತ್ರದ ಘೋಷಣೆಗೆ ಕಾಯುತ್ತಿರುವ ದರ್ಶನ್ ಅಭಿಮಾನಿಗಳಿಗೆ ಗಣೇಶ ಚತುರ್ಥಿಯಂದು ಸಿಹಿ ಸುದ್ದಿ ಸಿಗಲಿದೆ. ಹೌದು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ 55ನೇ ಸಿನಿಮಾದ ಶೀರ್ಷಿಕೆ ಗಣೇಶ ಹಬ್ಬದಂದು ರಿವೀಲ್ ಆಗಲಿದೆ. 2019ರಲ್ಲಿ ಎಲ್ಲರ ಗಮನ ಸೆಳೆದಿದ್ದ ‘ಯಜಮಾನ’ ಚಿತ್ರತಂಡವು ಡಿ55 ಸಿನಿಮಾದ ಮೂಲಕ ಇದೀಗ ಮತ್ತೆ ಒಂದಾಗುತ್ತಿದೆ. ಸಿನಿಮಾವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸಲಿದ್ದಾರೆ. ದರ್ಶನ್ ಟ್ವಿಟರ್‌ ನಲ್ಲಿ ಶೀರ್ಷಿಕೆ ಅನಾವರಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ ‘ರಾಬರ್ಟ್‌’ ದರ್ಶನ್‌ ನಟನೆಯ 53ನೇ ಸಿನಿಮಾ. ಪ್ರಸ್ತುತ ದರ್ಶನ್, ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸಿರುವ ‘ರಾಜವೀರ ಮದಕರಿ ನಾಯಕ’ ದರ್ಶನ್ 54ನೇ ಸಿನಿಮಾವಾಗಿದೆ.