ದೃಷ್ಟಿ ವಿಶೇಷಚೇತನೆಗೆ ಚಿನ್ನದ ಪದಕ. ಮೈಸೂರು,ಸೆಪ್ಟಂಬರ್,7,2021(..):ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಅಂಡಿತವಳ್ಳಿ ಗ್ರಾಮದ ದೃಷ್ಟಿ ವಿಶೇಷ ಚೇತನೆ ಲತಾ ಎಚ್.ಎನ್. ಅವರು ಎಂಎ ಕನ್ನಡದ ವಿಷಯದಲ್ಲಿ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಮೂಲತಃ ಕೃಷಿಕರಾದ ನಾಗರಾಜು, ರಾಧಾ ದಂಪತಿ ಪುತ್ರಿಯಾದ ಲತಾ ಅವರು ಬಾಲ್ಯದಲ್ಲೇ ದೃಷ್ಟಿ ಕಳೆದುಕೊಂಡರು. ಆದರೂ ಛಲ ಬಿಡದೆ ಓದಿ ಇದೀಗ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಾರಾಣಿ ಕಾಲೇಜಿನಲ್ಲಿ ಬಿಎ ಮುಗಿಸಿ ನಂತರ ಮಾನಸಗಂಗೋತ್ರಿಯಲ್ಲಿ ಎಂಎ ಕನ್ನಡಕ್ಕೆ ಸೇರಿಕೊಂಡರು. ನನಗೆ ಪ್ರಾಧ್ಯಾಪಕಿ ಆಗಬೇಕೆಂಬ ಕನಸು ಇದೆ. ಚಿಕ್ಕ ವಯಸ್ಸಿನಿಂದಲೂ ಲೆಕ್ಚರ್ ಆಗುವ ಗುರಿ ಇಟ್ಟುಕೊಂಡಿದ್ದೇನೆ. ಮುಂದೆ ಎನ್ ಇಟಿ ಮುಗಿಸಿ ಪಿಎಚ್.ಡಿ ಮಾಡಿ ಪ್ರಾಧ್ಯಾಪಕಿ ವೃತ್ತಿ ಜೀವನ ಆರಂಭಿಸುವ ಕನಸು ಇಟ್ಟುಕೊಂಡಿದ್ದೇನೆ ಎಂದು ಲತಾ ಅವರು ತಿಳಿಸಿದ್ದಾರೆ. … , 7, 2021 (..): .., . , . . ’ . . ’ , . . .. . - 101st .: / 101st / / / / : – –-101stconvocation