ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ: ಅಮಿತ್ ಶಾ ಹೇಳಿಕೆ ಬಗ್ಗೆ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು ಹೀಗೆ…? ಮೈಸೂರು,ಸೆಪ್ಟಂಬರ್,7,2021(..):ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಸಚಿವ ಡಾ.ಅಶ್ವಥ್ ನಾರಾಯಣ್, ಯಾವುದೇ ಪಕ್ಷದಲ್ಲಿ ನಾಯಕರಿದ್ದಾಗ ಅವರ ಮುಂದಾಳತ್ವದಲ್ಲಿ ಎಲ್ಲಾ ನಡೆದುಕೊಂಡು ಹೋಗ್ತಿರುತ್ತೆ. ಈಗ ಸಿಎಂ ಬೊಮ್ಮಾಯಿ ಇದ್ದಾರೆ, ಅಧ್ಯಕ್ಷರು ಕಟೀಲ್ ಇದ್ದಾರೆ. ಅವರ ಮುಂದಾಳತ್ವದಲ್ಲಿ ಪಕ್ಷ ನಡೆಯುತ್ತಿದೆ. ಮುಂದಿನ ಚುನಾವಣೆ ಯಾರ ನಾಯಕತ್ವದಲ್ಲಿ ನಡಿಯಬೇಕು ಅನ್ನೊದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ.ಅದರ ಚರ್ಚೆ ಈಗ ಬೇಡ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು. ಆಫ್ಘನ್ ವಿದ್ಯಾರ್ಥಿಗಳ ವೀಸಾ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ್, ಅದನ್ನ ವಿದೇಶಾಂಗ ಸಚಿವರು ನೋಡಿಕೊಳ್ತಾರೆ. ಅವಧಿ ಮುಗಿದವರು ಅರ್ಜಿ ಹಾಕಿಕೊಳ್ಳಲಿ. ಅದನ್ನ ವಿದೇಶಾಂಗ ಇಲಾಖೆಯವರು ಅವರು ಪರಿಶೀಲನೆ ಮಾಡ್ತಾರೆ. ನಾವು ಯಾರಿಗೂ ತಿಂಗಳ ಅವಧಿಗೆ ವೀಸಾ ಕೊಡೊದಿಲ್ಲ. ಶೈಕ್ಷಣಿಕ ಅವಧಿಗೆ ಅಂತ ವೀಸಾ ಪಡೆದುಕೊಂಡಿರ್ತಾರೆ.ಇದರಲ್ಲಿ ನಾವು ತಲೆತೂರಿಸುವ ಪ್ರಮೇಯ ಇಲ್ಲ ಎಂದು ತಿಳಿಸಿದರು. ನಿಗದಿಯಂತೆ ಪ್ರಸಕ್ತ ಸಾಲಿನಿಂದಲೇ ಜಾರಿ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ನಿಗದಿಯಂತೆ ಪ್ರಸಕ್ತ ಸಾಲಿನಿಂದಲೇ ಜಾರಿ ಮಾಡಲಾಗುತ್ತದೆ. ಈ ನೀತಿ ಸಂಪೂರ್ಣ ಅನುಷ್ಠಾನಕ್ಕೆ 15 ವರ್ಷ ಕಾಲಾವಕಾಶ ಇದೆ. ಈಗಾಗಲೇ ಏಳೆಂಟು ವರ್ಷದಿಂದಲೇ ಚರ್ಚೆಯಲ್ಲಿರೋದ್ರಿಂದ ಅಭಿಪ್ರಾಯ ಸಂಗ್ರಹ ಅಗತ್ಯವಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಠಿ ಮಾಡ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹಿಂದುಳಿದ ವರ್ಗ ಸೇರಿ ಎಲ್ಲರ ಅಭಿವೃದ್ಧಿ ಸಾಧ್ಯ ಇದೆ. ಕಾಂಗ್ರೆಸ್ ಗೆ ಯಾವುದೇ ಅಭಿವೃದ್ಧಿ ಬೇಕಾಗಿಲ್ಲ. ಹೀಗಾಗಿಯೇ ಅವರು ಅನಗತ್ಯ ಹೊಂದಲ ಸೃಷ್ಠಿ ಮಾಡಿ ವಿರೋಧ ಮಾಡ್ತಿದ್ದಾರೆ ಎಂದು ಹೇಳಿದರು. …. : ’ ’ , 7,2021 (..): “ ,” . .. . ’ , , “ . . . .” , . “ . . , ’ ’ . . ’ ,” . , . “ 15 . 7-8 , . . , . ’ . ,” .: / . .. / / / : – - - -