ಈ ಬಾರಿ ಮೈಸೂರು ದಸರಾ ಮಹೋತ್ಸವಕ್ಕೆ ಬಂಡೀಪುರದ ಮೂರು ಆನೆಗಳು ಆಯ್ಕೆ. ಮೈಸೂರು,ಸೆಪ್ಟಂಬರ್,6,2021(..):ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ ಈ ಬಾರಿಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜಂಬೂ ಸವಾರಿಗೆ ಬಂಡೀಪುರದ ಮೂರು ಆನೆಗಳನ್ನ ಆಯ್ಕೆ ಮಾಡಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ರಾಂಪುರ ಆನೆ ಶಿಬಿರಕ್ಕೆ ಮೈಸೂರು ಡಿಸಿಎಫ್ ಕಾರಿಕಾಳನ್ ಭೇಟಿ ನೀಡಿದರು. ಈ ಬಾರಿಯ ಜಂಬೂಸವಾರಿಗೆ ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಸರಳ ದಸರಾ ಆಚರಣೆ ಹಿನ್ನೆಲೆ ಎಷ್ಟು ಆನೆಗಳು ಭಾಗವಹಿಸಬೇಕು ಎಂಬುದನ್ನ ನಿರ್ಧರಿಸಬೇಕಿದೆ. ಅಕ್ಟೋಬರ್ 7 ರಂದು ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು ಅಕ್ಟೋಬರ್ 15 ರಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. : - - – –