ಬೊಮ್ಮಾಯಿಗೆ ಅವರದ್ದೇ ಆದ ಸ್ವಂತಿಕೆ ಇದೆ, ಅವರು ಬಿಎಸ್ ವೈ ನೆರಳಲ್ಲ- ಹೆಚ್.ವಿಶ್ವನಾಥ್ ನುಡಿ ಮೈಸೂರು,ಸೆಪ್ಟಂಬರ್,6,2021(..):ಸಿಎಂ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪ ಅವರ ನೆರಳಲ್ಲ. ಬೊಮ್ಮಾಯಿ ಅವರಿಗೆ ಅವರದೇ ಆದ ಸ್ವಂತಿಕೆ ಇದೆ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ನುಡಿದಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸಿಎಂ ಬೊಮ್ಮಾಯಿ ಸಮಾಧಾನಕರವಾದ ಆಢಳಿತ ನೀಡುತ್ತಿದ್ದಾರೆ. ಬೊಮ್ಮಾಯಿ ಅವರ ಮಾತುಗಳು ಜನರಲ್ಲಿ ಭರವಸೆ ಮೂಡಿಸುತ್ತಿವೆ. ಜನರ ಬಳಿಗೆ ಅಭಿವೃದ್ಧಿಯೇ ಹೊರತು ಅಭಿವೃದ್ಧಿ ಸುತ್ತ ಜನರಲ್ಲ. ಈ ವಿಚಾರದಲ್ಲಿ ಬೊಮ್ಮಾಯಿ ಆಢಳಿತ ಸುಧಾರಿಸಿದೆ. ಮೊದಲು ಕುಟುಂಬ ಕೇಂದ್ರವಾಗಿ ಆಡಳಿತ ಹೋಗುತ್ತಿತ್ತು. ಈಗ ಜನ ಕೇಂದ್ರೀಕೃತವಾಗಿ ಆಡಳಿತ ಸಾಗುತ್ತಿದೆ ಎಂದು ಹೊಗಳಿದರು. ಅಮಿತ್ ಶಾ ಹೇಳಿಕೆಗೆ ಬೆಂಬಲ. ಮುಂದಿನ ಚುನಾವಣೆ ನೇತೃತ್ವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬೆಂಬಲಿಸಿದ ಹೆಚ್.ವಿಶ್ವನಾಥ್, ಯಾವುದೇ ಪಕ್ಷವಾದರೂ ಆಗಿನ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರನ್ನ ಸೇರಿಸಿಕೊಂಡು ಚುನಾವಣೆ ಎದರಿಸುತ್ತೆ. ಯಾರು ಏನೇ ಹೇಳಿದರೂ ಮೇಟಿ ಎಂಬುವರು ಒಬ್ಬ ಬೇಕಾಗುತ್ತೆ ಎಂದರು. ಯಾರು ಸಿಎಂ ಮತ್ತು ಪಕ್ಷದ ಅಧ್ಯಕ್ಷರಾಗಿರುತ್ತಾರೋ ಅವರದ್ದೇ ನಾಯಕತ್ವ ಇರುತ್ತದೆ. ಸಾಮೂಹಿಕ ನಾಯಕತ್ವ ಇದ್ದರೂ ಒಬ್ಬ ಮೇಟಿ ಬೇಕು. ಅದು ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಆಗಿದ್ದಾರೆ ಎಂದು ಹೆಚ್ ವಿಶ್ವನಾಥ್ ಹೇಳಿದರು. ಉಳಿದಿರುವ ಸಚಿವ ಸ್ಥಾನ ತುಂಬುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಯಾವುದೇ ಕಾರಣಕ್ಕೂ ಅದನ್ನು ಸಿಎಂ ಇಟ್ಟುಕೊಳ್ಳಬಾರದು. ಖಾತೆಗಳನ್ನು ಆದಷ್ಟು ಬೇಗ ಹಂಚಿಕೆ ಮಾಡಬೇಕು. ಬಹುಶಃ ವಿಧಾನಸಭೆ ಅಧಿವೇಶನ ಮುಗಿದ ನಂತರ ಹಂಚಿಕೆ ಮಾಡಲಿದ್ದಾರೆ ಎಂದು ಹೇಳಿದರು. … ‘ , ’ : . , 6, 2021 (..): “ .. . ,” . . . . , . ’ . -, -, .: . / / : - - - –-- .