ಪ್ಯಾರಾಲಿಂಪಿಕ್ಸ್ : ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ಪ್ರಮೋದ್ ಭಗತ್ ನವದೆಹಲಿ,ಸೆಪ್ಟಂಬರ್,4,2021(..):ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಹೌದು ಬ್ಯಾಂಡ್ಮಿಂಟನ್ ನಲ್ಲಿ ಪ್ರಮೋದ್ ಭಗತ್ ಬಂಗಾರ ಪದಕಕ್ಕೆ ಮುತ್ತಿಕ್ಕಿದ್ದಾರೆ . ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದ ಫೈನಲ್‌ನಲ್ಲಿ ಡೇನಿಯಲ್ ಬ್ರೆಥೆಲ್ ಅವರನ್ನು ಸೋಲಿಸುವ ಮೂಲಕ ಪ್ರಮೋದ್ ಭಗತ್ ಚಿನ್ನದ ಪದಕ ತನ್ನದಾಗಿಸಿಕೊಂಡರು. 45 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಮೋದ್ ಭಗತ್ 21-14, 21-17ರಲ್ಲಿ ಡೇನಿಯಲ್ ಅವರನ್ನು ಸೋಲಿಸಿದರು. ವಿಶ್ವದ ನಂಬರ್ ಒನ್ ಆಟಗಾರ ಪ್ರಮೋದ್ ಭಗತ್ ಕೂಡ ಫೈನಲ್ ತಲುಪಿದ ಮೊದಲ ಆಟಗಾರ ಎನಿಸಿಕೊಂಡರು. : -- -