ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯದ ಗರಿಷ್ಠ ಮಿತಿ ಹೆಚ್ಚಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಬೆಂಗಳೂರು,ಸೆಪ್ಟಂಬರ್,4,2021(..):ಕರ್ನಾಟಕ ಭೂ ಕಂದಾಯ ಕಾಯಿದೆ-೧೯೬೪ 94- ಗೆ ಪ್ರಸ್ತುತ ಇರುವ ಆದಾಯದ ಗರಿಷ್ಟ ಮಿತಿಯನ್ನು ರೂ 1,20000 ಕ್ಕೆ ಹೆಚ್ಚಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯಿದೆ 94- ಅಡಿಯಲ್ಲಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಗಳಿಸಲು ಪ್ರಸ್ತುತ ಇರುವ ವಾರ್ಷಿಕ ಗರಿಷ್ಠ ಆದಾಯದ ಮಿತಿಯನ್ನು ರೂ. 30000 ದಿಂದ ವಾರ್ಷಿಕ ಗರಿಷ್ಟ ರೂ.1,20000 ಕ್ಕೆ ಮಿತಿಗೆ ಹೆಚ್ಚಿಸಬೇಕೆಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿರುವ ಸಚಿವ ಅರಗ ಜ್ಞಾನೇಂದ್ರ, ಗರಿಷ್ಟ ಆದಾಯದ ಮಿತಿಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯಿದೆ-೧೯೬೪ (ಕರ್ನಾಟಕ ಕಾಯಿದೆ-೧೨ ೧೯೬೪) 94- ಗೆ ತಿದ್ದುಪಡಿ ತಂದು ಗರಿಷ್ಟ ಮಿತಿಯನ್ನು ರೂ 1,20000/- ಕ್ಕೆ ಪರಿಷ್ಕರಿಸಿ ಆದೇಶ ಹೊರಡಿಸಲು ಕೋರಿದ್ದಾರೆ. ಆಹಾರ ಇಲಾಖೆಯಲ್ಲಿ ಬಿ ಪಿ ಎಲ್ ಕಾರ್ಡ್ ಫಲಾನುಭವಿಗಳಾಗಲು ಪ್ರಸ್ತುತ ಇರುವ ಆದಾಯದ ಮಿತಿ ರೂ 1,20000 ಇರುವುದನ್ನು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನಕ್ಕೆ ತಂದಿದ್ದಾರೆ. … , 4, 2021 (..): 94- , 1964, .1,20,000. , . , , 94- .30,000 .1,20,000. . 1,20,000 , .: / / / / / : - - – - - - - .