ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣ: 2 ಕೆಜಿಗೂ ಹೆಚ್ಚು ಚಿನ್ನಾಭರಣ ಕಳ್ಳತನ: ಮತ್ತೊಬ್ಬ ಆರೋಪಿಗಾಗಿ ಶೋಧಕಾರ್ಯ. ಮೈಸೂರು,ಸೆಪ್ಟಂಬರ್,4,2021(..):ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ದರೋಡೆ ಶೂಟ್‌ ಔಟ್ ಪ್ರಕರಣ ಸಂಬಂಧ ಆರೋಪಿಗಳು ಸುಮಾರು 2 ಕೆಜಿಗೂ ಹೆಚ್ಚು ಚಿನ್ನಾಭರಣ ಕಳ್ಳತನ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದರೋಡೆ ಮಾಡಿದವರ ಪೈಕಿ 60 ವರ್ಷದ ವೃದ್ದ ದರೋಡೆಕೋರನ ಬಳಿ ಸಿಂಹಪಾಲಿದ್ದು ಈತನೇ ಪ್ರಮುಖ ಆರೋಪಿಯಾಗಿದ್ದಾನೆ. ಆದರೆ ಈತ ಇನ್ನು ಪೊಲೀಸರ ಕೈಗೆ ಸಿಕ್ಕಿಲ್ಲ. ದೋಚಿರುವ 2 ಕೆಜಿ ಚಿನ್ನದ ಪೈಕಿ ಈತನ ಬಳಿಯೇ 1 ಕೆಜಿಗೂ ಹೆಚ್ಚು ಚಿನ್ನಾಭರಣವಿದೆ. ಈತ 20 ವರ್ಷದವನಿದ್ದಾಗಲಿಂದಲೂ ಕಳ್ಳತನ ಮಾಡುತ್ತಿದ್ದು, ಆಭರಣ ದರೋಡೆ ಮಾಡುವುದರಲ್ಲಿ ಪರಿಣಿತಿ ಹೊಂದಿದ್ದ. ಈತನನ್ನ ಬಾಂಬೆ ಬುಡ್ಡಾ ಅಂತಲೇ ಕರೆಯಲಾಗುತ್ತಿದೆ. ಸದ್ಯ ಪ್ರಕರಣದಲ್ಲಿ ಆರೋಪಿ ತಲೆ ತಪ್ಪಿಸಿಕೊಂಡಿದ್ದು, ಈತನನ್ನ ಬಂಧಿಸಲು ಮೈಸೂರು ಪೊಲೀಸರು ಮುಂಬೈಗೆ ತೆರಳಿ ಶೋಧಕಾರ್ಯ ನಡೆಸುತ್ತಿದ್ದಾರೆ. ಆ 23ರಂದು‌ ನಗರದ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ ನಲ್ಲಿ ದರೋಡೆ ಶೂಟೌಟ್ ನಡೆದಿತ್ತು. ದರೋಡೆ ವೇಳೆ ಆರೋಪಿಗಳು ದಡದಹಳ್ಳಿ ಚಂದ್ರು ಎಂಬುವವರಿಗೆ ಗುಂಡು ಹಾರಿಸಿದ್ದರು. ಇದರಿಂದಾಗಿ ಚಂದ್ರು ಮೃತಪಟ್ಟಿದ್ದರು. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. … , : 2 ; , . 4, 2021 (..): 2 , . 60-- . . , , . 1 . 20 . ‘ ’. . 23. . , . . .: / / / / ————————————————- : - - – - 2 -