ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಮತದಾನ : ಬಿಜೆಪಿ ಮತ್ತು ಕೆಆರ್ ಎಸ್ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ. ಹುಬ್ಬಳ್ಳಿ,ಸೆಪ್ಟಂಬರ್,3,2021(..):ಹುಬ್ಬಳ್ಳಿ-ಧಾರವಾಡ, ಕಲ್ಬುರ್ಗಿ ಮತ್ತು ಬೆಳಗಾವಿ ಇಂದು ನಗರ ಪಾಲಿಕೆ ಚುನಾವಣೆ ನಡೆಯುತ್ತಿದ್ದು ಮತದಾನ ಪ್ರತಿಕ್ರಿಯೆ ಆರಂಭವಾಗಿದೆ.ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸೆಪ್ಟೆಂಬರ್ 6 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ ಹುಬ್ಬಳ್ಳಿಯಲ್ಲಿ ಬಿಜೆಪಿ ಮತ್ತು ಕೆಆರ್ ಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ವಾರ್ಡ್ ನಂ,52ರಲ್ಲಿ ಮತದಾನ ವಿಚಾರಕ್ಕೆ ಗೊಂದಲ ಉಂಟಾಗಿದ್ದು , ಪೊಲೀಸರು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು. ಇದೇ ವಿಚಾರಕ್ಕೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಜತೆ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. ಹುಬ್ಬಳ್ಳಿ ಧಾರವಾಡ ಪಾಲಿಕೆಯ ವಾರ್ಡ್ ಸಂಖ್ಯೆ 28ರಲ್ಲಿ ವಿವಿ ಪ್ಯಾಟ್ ಇಲ್ಲದ ಹಿನ್ನೆಲೆ 5 ಮತಕೇಂದ್ರಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಇನ್ನು ಬೆಳಗಾವಿಯಲ್ಲಿ ಬೆಳಿಗ್ಗೆ 9 ಗಂಟೆ ವೇಳೆಗೆ ಶೇ. 5.39 ರಷ್ಟು ಮತದಾನವಾಗಿದೆ. ಬೆಳಗಾವಿಯಲ್ಲಿ 58 ವಾರ್ಡ್ ಗಳಿದ್ದು ಮ್ಯಾಜಿಕ್ ನಂ. 33 ಆಗಿದೆ ಕಲ್ಬುರ್ಗಿ ಪಾಲಿಕೆಯಲ್ಲಿ 55 ವಾರ್ಡ್ ಗಳಿದ್ದು 31 ಮ್ಯಾಜಿಕ್ ನಂ.ಆಗಿದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ 82 ವಾರ್ಡ್ ಗಳಿದ್ದು 45 ಮ್ಯಾಜಿಕ್ ನಂ.ಆಗಿದೆ. … : , 3, 2021 (..): -, , . 6.00 . 6. . . 52 . . , , , . 5 - . 28 . 5.39% 9.00 . 58 33. 55 31 - 82 45.: -/ / / / : – – – - –- - - .