ಮೈಸೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ. ಮೈಸೂರು,ಸೆಪ್ಟಂಬರ್, 2,2021(..):ಸೆಪ್ಟೆಂಬರ್-ಅಕ್ಟೋಬರ್‌ ನಲ್ಲಿ ನಡೆಯಬೇಕಿದ್ದ ಮೈಸೂರು ವಿವಿಯ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಸೆ.3ರಂದು ಆರಂಭವಾಗಬೇಕಿದ್ದ ಸ್ನಾತಕ ಪದವಿಯ (ಯುಜಿ) 6ನೇ ಸೆಮಿಸ್ಟರ್ (ಸಿಬಿಸಿಎಸ್/ನಾನ್ ಸಿಬಿಸಿಎಸ್-ಪ್ರೆಶರ್ಸ್), 2ನೇ ಸೆಮಿಸ್ಟರ್‌ನ (ಸಿಬಿಸಿಎಸ್-ಪುನಾರ್ವತಿತ) ಹಾಗೂ 2, 4 ಮತ್ತು 6ನೇ ಸೆಮಿಸ್ಟರ್‌ನ (ನಾನ್ ಸಿಬಿಸಿಎಸ್-ಪುನಾವರ್ತಿತ) ಪದವಿ ಪರೀಕ್ಷೆಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಸದರಿ ಪರೀಕ್ಷೆಯನ್ನು ಸೆ.13ರಿಂದ ನಡೆಸಲು ಉದ್ದೇಶಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಮುಂದೆ ಹೊರಡಿಸಲಾಗುವುದು ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … , 2, 2021 (..): - . 6th (/--), 2nd (- ), 2,4, 6th (--) 3. . 13. , , . .. , (), .: / / : - - -