ನಾಳೆ ಸಂಜೆ ಮೈಸೂರು ದಸರಾ ಹೈಪವರ್ ಕಮಿಟಿ ಸಭೆ. ಮೈಸೂರು,ಸೆಪ್ಟಂಬರ್,2,2021(..):ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಕುರಿತು ನಾಳೆ ಬೆಂಗಳೂರಿನಲ್ಲಿ ಹೈ ಪವರ್ ಕಮಿಟಿಯ ಮೊದಲ ಸಭೆ ನಡೆಯಲಿದೆ. ನಾಳೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ದಸರಾದ ಪ್ರಮುಖ ರೂಪುರೇಷಗಳ ಬಗ್ಗೆ ನಾಳೆ ಸಭೆಯಲ್ಲಿ ಚರ್ಚೆಯಾಗಲಿದೆ. ಈ ಬಾರಿಯ ದಸರಾ ಸರಳವೂ,ಪಾರಂಪರಿಕವೂ, ಇಲ್ಲ ಸಂಭ್ರಮದ ದಸರಾ ಆಚರಣೆಯೊ, ಕಳೆದ ಬಾರಿಯಂತೆ ಈ ಬಾರಿಯೂ ಜಂಬೂ ಸವಾರಿ ಅರಮನೆ ಅವರಣಕ್ಕೆ ಮಾತ್ರ ಸೀಮಿತವಾಗಲಿದ್ಯಾ ಎಂಬುದು ನಾಳೆ ನಿರ್ಧಾರವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಹೈಪವರ್ ಕಮಿಟಿ ಮೀಟಿಂಗ್ ನತ್ತ ಇದೆ. : - - - -.